ಗದ್ದುಗೆಗಾಗಿ ಗುದ್ದಾಟ ಕಾಂಗ್ರೆಸ್ ವರ್ಚಿಸ್ಸಿಗೆ ಧಕ್ಕೆ

ಕೋಲಾರ,ಮೇ,೧೮:ರಾಜ್ಯದ ಮುಖ್ಯ ಮಂತ್ರಿ ಸ್ಥಾನಕ್ಕೆ ನಡೆಯುತ್ತಿರುವ ಗದ್ದುಗಾಗಿ ಗುದ್ದಾಟವೂ ಮತದಾರರ ಪ್ರಭುಗಳಿಗೆ ಮಾಡುತ್ತಿರುವ ಅಪಮಾನವಾದರೆ ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತಿದೆ. ಕಳೆದ ೩೫ ವರ್ಷಗಳ ನಂತರ ಮತದಾರ ಪ್ರಭುಗಳು ಬಹುಮತ ನೀಡುವ ಮೂಲಕ ಸ್ವಂತ ಬಲದ ಮೇಲೆ ಸರ್ಕಾರ ರಚಿಸಿ ಪ್ರಜೆಗಳ ಸೇವೆ ಸಲ್ಲಿಸಲು ನೀಡಿದ ಅವಕಾಶವನ್ನು ದುರ್‍ಬಳಿಸಿ ಕೊಳ್ಳಲು ಮುಂದಾಗಿರುವುದು ನಾಚಿಕೆಗೇಡು ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ರಾಜ್ಯದಲ್ಲಿ ಚುನಾವಣೆ ಪ್ರಕ್ರಿಯೆಗಳು ಮುಗಿದು ಮೂರು ದಿನಗಳೇ ಕಳೆದರೂ ಸಹ ಇನ್ನು ಸರ್ಕಾರ ರಚಿಸದೆ ದೆಹಲಿಯಲ್ಲಿ ಇಬ್ಬರೂ ಮುಖಂಡರು ಕಬ್ಬಡಿ ಆಟ ಆಡುತ್ತಾ ಕಾಲ ಕಳೆಯುತ್ತಿರುವುದು ಇವರ ಆಡಳಿತ ವೈಖರಿಯ ಕೈಗನ್ನಡಿಯಾಗಿದೆ ಎಂಬ ಟೇಕೆಗಳು ಕೇಳಿಬರುತ್ತಿದೆ
ವ್ಯಕ್ತಿಗಿಂತ ಪಕ್ಷ ಮುಖ್ಯ, ಹೈಕಮಾಂಡ್ ತೀರ್ಮಾನಕ್ಕೆ ನಾವೇಲ್ಲಾ ಬದ್ದವಾಗಿದ್ದೇವೆ ಎಂದು ಶಿಸ್ತಿನ ಸಿಪಾಯಿಗಳಂತೆ ದೃಶ್ಯ ಮಾದ್ಯಮಗಳೇ ಬೊಗಳೆ ಬಿಡುತ್ತಿದ್ದ ನಾಯಕರು ಇಂದು ದೆಹಲಿಯಲ್ಲಿ ಹೈಕಮಾಂಡ್ ಆದೇಶಗಳಿಗೆ ಕಿಮ್ಮತ್ತು ಕಾಸಿನ ಬೆಲೆಯೂ ನೀಡದಂತೆ ಮುಖ್ಯ ಮಂತ್ರಿ ಪದವಿಗಾಗಿ ರಚ್ಚೆ ಹಿಡಿದು ದೆಹಲಿಯಲ್ಲಿ ಜಂಡಾ ಹಾಕಿಕೊಂಡು ಪರಸ್ಪರ ಕೆಸರಿನ ಎರಚಾಟದಲ್ಲಿ ತೊಡಗಿಸಿ ಕೊಂಡು ಪ್ರತಿಪಕ್ಷಗಳ ನಗೆಪಾಟಿಲಿಗೆ ಗುರಿಯಾಗಿದ್ದಾರೆ. ಕರ್ನಾಟಕ ಕಾಂಗ್ರೇಸ್ ಪಕ್ಷದ ಕಿತ್ತಾಟ ಭಿನ್ನಮತಗಳ ಸ್ಪೋಟವು ರಾಷ್ಟವ್ಯಾಪ್ತಿ ಪ್ರಚಾರ ಪಡೆದು ಕಾಂಗ್ರೇಸ್ ಪಕ್ಷಕ್ಕೆ ಮತ ನೀಡುವ ಮೂಲಕ ಅಧಿಕಾರಕ್ಕೆ ತಂದ ಮತದಾರರ ಪ್ರಭುಗಳಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ವ್ಯಂಗವಾಡಿದ್ದಾರೆ.
ಕಾಂಗ್ರೇಸ್ ಪಕ್ಷವು ತತ್ವ ಸಿದ್ದಾಂತಗಳಿಗೆ ಬದ್ದವಾಗಿರುವಂತ ಶಿಸ್ತಿನ ಪಕ್ಷವೆಂದು ಬೀಗುತ್ತಿದ್ದ ನಾಯಕರುಗಳೇ ಇಂದು ದೆಹಲಿ ಪರಸ್ಪರ ಒಬ್ಬರಿಗೊಬ್ಬರು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಹೇಳುವುದೊಂದು……. ಮಾಡುವುದೊಂದು……. ಎಂಬುವುದನ್ನು ಪ್ರದರ್ಶಿಸುವ ಮೂಲ ವಿಶ್ವಾಸಘಾತುಕರಾಗುತ್ತಿದ್ದಾರೆ.
ಕರ್ನಾಟಕದ ಮುಖ್ಯ ಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿ. ನಡುವೆಯುತ್ತಿರುವ ಕಾಳಗದಲ್ಲಿ ಹಿಂಬಾಲಕರಾಗಿರುವವರು ಈಗಲೇ ಸಚಿವ ಸ್ಥಾನಕ್ಕೆ ಟವಲ್ ಹಾಸಿ ತಮಗೆ ಇಂಥಹುದೆ ಖಾತೆಗಳನ್ನು ನೀಡ ಬೇಕೆಂದು ಒತ್ತಾಯಿಸುತ್ತಿರುವುದು ಕಂಡರೆ ಬೆಂಕಿ ಬಿದ್ದ ಮನೆಯಲ್ಲಿ ಬೀಡಿ ಹೊತ್ತಿಸಿ ಕೊಂಡಂತೆ ಕಂಡು ಬರುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಇರುವವರಿಗೆ ಅಧಿಕಾರದ ಸ್ಥಾನ ನೀಡ ಬೇಕೆಂಬ ಸಿದ್ದಾಂತಗಳಿಗೆ ವಿರುದ್ದವಾಗಿ ತಮಗೆ ಅಧಿಕಾರ ನೀಡಬೇಕೆಂದು ಹೈಕಮಾಂಡ್‌ನ್ನೆ ಹೈಜಾಕ್ ಮಾಡುತ್ತಿರುವವರ ವಿರುದ್ದ ರಾಜ್ಯದ ಜನತೆ ಬೇಸತ್ತಿದ್ದಾರೆ, ಬಾಡಿಗೆ ಭಂಟರ ಮೂಲಕ ರಾಜ್ಯದಲ್ಲಿ ತಮ್ಮ ಹವಾ ಸೃಷ್ಠಿಸುತ್ತಿರುವ ಕಾಳನಾಯಕರ ಬಗ್ಗೆಯೂ ನಾಚಿಕೆ ಪಡುವಂತಾಗಿದೆ, ಇವರ ಕಿತ್ತಾಟವು ಮುಂಬರಲಿರುವ ಲೋಕಸಭಾ ಚುನಾವಣೆಯ ಮೇಲೆ ಬಾರಿ ಪರಿಣಾಮ ಬೀರಲಿದೆ ಎಂಬ ಪರಿಜ್ಞಾನವೂ ಇಲ್ಲದೆ ಅಧಿಕಾರಕ್ಕಾಗಿ ಪಕ್ಷದ ವರ್ಚಸ್ಸನ್ನು ಬಲಿ ನೀಡುತ್ತಿರುವುದು ಎಷ್ಟು ಮಾತ್ರ ಸಮಂಜಸವಾಗಿದೆ ?ಎಂಬುವುದು ಮತದಾರರ ಪ್ರಭಯಗಳ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.