ಗದ್ದಲದ ನಡುವೆ ನಡೆದ ಪಾಲಿಕೆ ಸಾಮಾನ್ಯ ಸಭೆ 

ದಾವಣಗೆರೆ.ಆ.೬; : ಪಾಲಿಕೆ ಸಭೆ ಆರಂಭದಲ್ಲೇ ಜೀರೋ ಹವರ್ ಕುರಿತಂತೆ  ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಗದ್ದಲ ಏರ್ಪಟ್ಟು ಸಭೆ ಗೊಂದಲದ ಗೂಡಾಯಿತು.ಸಭೆಯ ಅಜೆಂಡಾ ಓದಲು ಮೇಯರ್ ಆದೇಶ ನೀಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಮಂಜುನಾಥ ಗಡಿಗುಡಾಳ್ ಅಜೆಂಡಾ ಓದುವ ಮೊದಲು ಜೀರೋ ಹವರ್ ನೀಡಿ ನಗರದ ಸಮಸ್ಯೆ ಚರ್ಚಿಸಲು ಅವಕಾಶ ಕೊಡುವಂತೆ ಒತ್ತಾಯಿಸಿದರು. ಆದರೆ ಮೇಯರ್ ಹಾಗೂ ಆಡಳಿತ ಪಕ್ಷದ ಸದಸ್ಯರು ಇದಕ್ಕೆ ಒಪ್ಪದೇ ಇದ್ದಾಗ ಗದ್ದಲ ಏರ್ಪಟ್ಟಿತು.ಪ್ರತಿಪಕ್ಷ ನಾಯಕ ಮಂಜುನಾಥ್ ಗಡಿಗುಡಾಳ್ ಮಾತನಾಡಿ, ನಗರದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅವುಗಳ ಕುರಿತು ಮೊದಲು ಚರ್ಚಿಸೋಣ ಬಳಿಕ ಅಜೆಂಡ ಕುರಿತು ಚರ್ಚಿಸೋಣ ಎಂದು ಸಲಹೆ ನೀಡಿದರು. ಮಧ್ಯಪ್ರವೇಶಿಸಿದ ಪಾಲಿಕೆ ಸದಸ್ಯ ಎ. ನಾಗರಾಜ್, ನಗರದಲ್ಲಿ ಎಲ್ಲೆಂದರಲ್ಲಿ ಯುಜಿಡಿ ಉಕ್ಕಿ ಹರಿಯುತ್ತಿದೆ. ಇದರೊಂದಿಗೆ ಹಲವು ಸಮಸ್ಯೆ ತಾಂಡವಾಡುತ್ತಿದೆ. ಮೊದಲು ಅವುಗಳ ಬಗ್ಗೆ ಚರ್ಚಿಸಲು ಅವಕಾಶ ಕೊಡಿ ಎಂದು ಮನವಿ ಮಾಡಿದರು.ಆದರೆ ಇದಕ್ಕೆ ಮೇಯರ್ ಸೇರಿ ಆಡಳಿತ ಪಕ್ಷದ ಯಾವುದೇ ಸದಸ್ಯರು ಒಪ್ಪಲಿಲ್ಲ. ಈ ವಿಷಯ ಕುರಿತಂತೆ ಅರ್ಧಗಂಟೆಗೂ ಹೆಚ್ಚು ಕಾಲ ಗಲಾಟೆ ನಡೆಯಿತು.ಮೇಯರ್ ತಾಯಿ ಸ್ಥಾನದಲ್ಲಿದ್ದಾರೆಮೇಯರ್ ಅವರೆ, ನೀವು ತಾಯಿ ಸ್ಥಾನದಲ್ಲಿ ಇದ್ದೀರಾ. ದಯವಿಟ್ಟು ಮಲತಾಯಿ ಧೋರಣೆ ಮಾಡಬೇಡಿ. ಎಲ್ಲರಿಗೂ ಸಮಾನ ಅವಕಾಶ ನೀಡಿ” ಎಂದು ಸದಸ್ಯ ಎ. ನಾಗರಾಜ್ ಮನವಿ ಮಾಡಿದರು. “ಮಕ್ಕಳು ತಾಯಿಯ ಮಾತು ಕೇಳಬೇಕು. ಆದ್ದರಿಂದ ಮೊದಲು ಅಜೆಂಡಾ ಓದಲು ಬಿಡಿ. ಸಭೆ ಕೊನೆಯಲ್ಲಿ ಇಲ್ಲವೇ ಸಭೆ ಮುಗಿದ ಬಳಿಕ ನಮ್ಮ ಕಚೇರಿಯಲ್ಲಿ ಎಲ್ಲರೂ ಕುಳಿತು ಚರ್ಚಿಸೋಣ ಎಂದು ಮೇಯರ್ ಹೇಳಿದರು. ವಿವಿಧ ವಿಷಯಗಳು ಹಾಗೂ ನಗರದ ಸಮಸ್ಯೆಗಳ ಕುರಿತಂತೆ ವಿಪಕ್ಷದ‌ ಸದಸ್ಯರು ಸುಧೀರ್ಘ ಚರ್ಚೆಗೆ ಮುಂದಾದ ಘಟನೆಯೂ ನಡೆಯಿತು.ಸಭೆಯಲ್ಲಿ ಶಾಸಕ ರವೀಂದ್ರನಾಥ್, ಉಪಮೇಯರ್ ಗಾಯತ್ರಿ ಬಾಯಿ, ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಸ್ಥಾಯಿ ಸಮಿತಿ ಸದಸ್ಯರು ಇದ್ದರು.ಇದೆ ವೇಳೆ ನೂತನ ಸದಸ್ಯರಾದ ಜೆ.ಎನ್. ಶ್ರೀನಿವಾಸ್ ಮತ್ತು ಶ್ವೇತಾ ಶ್ರೀನಿವಾಸ್ ಪ್ರಮಾಣ ವಚನ ಸ್ವೀಕರಿಸಿದರು

Attachments area