
ಬೀದರ:ಆ.8:ತೆಲಂಗಾಣ ರಾಜ್ಯದ ಕ್ರಾಂತಿಕಾರಿ ಕವಿ ಮತ್ತು ಹಾಡುಗಾರ ಗದ್ದರ್ ರವರು ದಿನಾಂಕ 06/08/2023 ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದ್ರಾಬಾದನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ¥ssÀಲಕಾರಿಯಾಗದೆ ನಿಧನರಾಗಿದ್ದಾರೆ. ಗದ್ದರರವರು 1949 ರಲ್ಲಿ ಮೇದಕ ಜಿಲ್ಲೆಯ ತುಫ್ರಾನ್‍ನಲ್ಲಿ ಜನಿಸಿದ ಅವರ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್ ತಮ್ಮ ಕ್ರಾಂತಿಕಾರಿ ಹಾಡುಗಳ ಮೂಲಕ ತೆಲಂಗಾಣ ಜನ ಚಳುವಳಿಗಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜನ ಸಂಸ್ಕøತಿಯ ಭಾಗವಾದ ಜನಪದ, ಹೋರಾಟದ ಹಾಡುಗಳಿಗೆ ಕ್ರಾಂತಿಕಾರಿ ಸ್ಪರ್ಶ ನೀಡಿ ಹೋರಾಟದ ಹಾಡುಗಳ ಮೂಲಕ ಪ್ರಜಾ ಸಂಸ್ಕøತಿ ಯುದ್ಧ ನೌಕೆಯಾಗಿ ಇಡೀ ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಗದ್ದರ್ ರವರು ಅಗಲಿಕೆ ಪ್ರಜಾಪ್ರಭುತ್ವವಾದಿ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ. ಅಂತಹ ಕ್ರಾಂತಿಕಾರಿ ಮಹನೀಯರು ಮತ್ತೊಮ್ಮೆ ಹುಟ್ಟು ಬರಲಿ ಹಾಗೂ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು, ಭಗವಾನ ಬುದ್ಧ ರವರಲ್ಲಿ ಅವರ ಕುಟುಂಬ ವರ್ಗದವರಿಗೆ ಶಕ್ತಿ ನೀಡಲೆಂದು ಬೀದರ ನಗರದ ಡಾ|| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಧ್ಯಾಹ್ನ 1:00 ಗಂಟೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳ ಹಾಗೂ ಪ್ರಗತಿಪರ ಸಂಘಟನೆಯ ಮುಖಂಡರುಗಳು ಸೇರಿ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರದ್ಧಾಂಜಲಿಯಲ್ಲಿ ಕಾ|| ಬಾಬುರಾವ ಹೊನ್ನಾ ವಕೀಲರು, ಕಾ|| ಆರ್.ಪಿ. ರಾಜಾ, ಮುಬಶೀರ್ ಸಿಂಧೆ, ಮಾರುತಿ ಬೌದ್ಧೆ ರಾಜ್ಯ ಸಂಘಟನಾ ಸಂಚಾಲಕರು ಕ.ರಾ.ದ.ಸಂ.ಸ. ರಾಜಕುಮಾರ ಮೂಲಭಾರತಿ ರಾಜ್ಯ ಉಪಾಧ್ಯಕ್ಷರು ಕ.ದ.ಸಂ.ಸ. ಚಂದ್ರಕಾಂತ ನಿರಾಟೆ ರಾಜ್ಯ ಉಪಾಧ್ಯಕ್ಷರು ದಲಿತ ಸೇನೆ, ಉಮೇಶಕುಮಾರ ಸೋರಳ್ಳಿಕರ್ ಜಿಲ್ಲಾ ಸಂಚಾಲಕರು ಕ.ರಾ.ದ.ಸಂ.ಸ. ಅಂಬರೀಷ ಕುದರೆ, ಜಿಲ್ಲಾಧ್ಯಕ್ಷರು, ಭೀಮಆರ್ಮಿ, ರಾಜಕುಮಾರ ಗುನ್ನಳ್ಳಿ ಸಂಸ್ಥಾಪಕ ಅಧ್ಯಕ್ಷರು, ಅಂಬೇಡ್ಕರ ಯುವಸೇನೆ, ಅರುಣ ಪಟೇಲ್ ಜಿಲ್ಲಾ ಸಂಘಟನಾ ಸಂಚಾಲಕರು, ಕ.ರಾ.ದ.ಸಂ.ಸ. ಮಾಣಿಕ ಖಾನಾಪೂರ, ಸಲೀಂ ಚಿಕನ್, ಲಕ್ಷ್ಮಣ ಕಾಂಬಳೆ ಹಾಗೂ ಇನ್ನಿತರ ಕಾಮ್ರೇಡ್ ಗದ್ದರ್ ಅಭಿಮಾನಿಗಳು ಭಾಗವಹಿಸಿದ್ದರು.