ಗದ್ದರ್ ನಿಧನಕ್ಕೆ ಕೋಲಾರ ದಲಿತ ಸಂಘಟನೆಗಳ ಸಂತಾಪ

ಕೋಲಾರ,ಆ,೭- ದಕ್ಷಿಣ ಭಾರತದ ಕ್ರಾಂತಿಕಾರಿ ನಾಯಕ ಗದ್ದರ್ (೭೭) ನಿಧನದಿಂದಾಗಿ ಪ್ರಜಾಪ್ರಭುತ್ವಕ್ಕೆ ಭಾರಿ ನಷ್ಟವುಂಟಾಗಿದೆ ಎಂದು ದಲಿತ ಸಂಘಟನೆಗಳು ಸಂತಾಪ ವ್ಯಕ್ತ ಪಡೆಸಿವೆ
ನೆರೆಯ ಅಂದ್ರ ಪ್ರದೇಶದ ಖ್ಯಾತ ಕ್ರಾಂತಿಕಾರಿ ಗಾಯಕ ಗದ್ದರ್ ಎಂದೆ ಪ್ರಚಲಿತದಲ್ಲಿರುವ ಗುಮ್ಮಡಿ ವಿಠಲ್ ರಾವ್ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಹೈದರಬಾದ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು, ಅವರಿಗೆ ಮೊನ್ನೆಯಷ್ಟೆ ಹೃದ್ರೋಗದ ಬೈಪಾಸ್ ಚಿಕಿತ್ಸೆಗೆ ಒಳಗಾಗಿ ಚೇತರಿಸಿ ಕೊಳ್ಳುತ್ತಿದ್ದಾಗಲೆ ಇತರೆ ಕಾಯಿಲೆಗಳ ಉಲ್ಲಣದಿಂದಾಗಿ ಅವರು ಭಾನುವಾರ ಕೊನೆಯುಸಿರೆಳೆದರು.
ಪಂಜಾಬ್ ರಾಜ್ಯದಲ್ಲಿ ಬ್ರಟಿಷರ ಅಧಿಪತ್ಯವನ್ನು ವಿರೋಧಿಸಿದ್ದ ಗದ್ದರ್ ಪಕ್ಷದ ಹಿನ್ನಲೆಯಲ್ಲಿ ತಮ್ಮ ಹೆಸರನ್ನು ಗದ್ದರ್ ಎಂದು ಮರು ನಾಮಕರಣ ಮಾಡಿ ಕೊಂಡಿದ್ದರು, ತೆಲಂಗಾನದ ತೂಪ್ರಾನ್‌ನಲ್ಲಿ ಹುಟ್ಟಿದ್ದ ಗದ್ದರ್ ನಿಜಾಮಾಬಾದ್, ಹೈದರಾಬಾದ್‌ನಲ್ಲಿ ವ್ಯಾಸಂಗ ಮಾಡಿ ೧೯೭೫ರಲ್ಲಿ ಕೆನಾರ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದ್ದರು,
ಸಮಾಜದಲ್ಲಿನ ಶೋಷಣೆ, ಅನ್ಯಾಯಗಳ ವಿರುದ್ದ ಸಿಡಿದೆದ್ದು ನಕ್ಸಲ್ ಚಳವಳಿಯತ್ತ ಆರ್ಕಷಿತರಾದರು, ಜನನಾಟ್ಯ ಮಂಡಳಿಯ ಮೂಲಕ ಅವಿಭಜಿತ ಆಂದ್ರ ಪ್ರದೇಶದಲ್ಲಿ ಊರೂರು ತಿರುಗುತ್ತ ಜನರನ್ನು ಸಂಘಟಿಸಿದರು, ಸ್ಥಳದಲ್ಲೇ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದ ಗದ್ದರ್ ಅವರು ಹಾಡುಗಳು ತೆಲುಗು ಜನ ಸಮುದಾಯದ ನಡುವೆ ತುಂಬಾ ಜನಪ್ರಿಯಗೊಂಡಿತ್ತು, ಗದ್ದರ್ ಹಾಡಲು ಪ್ರಾರಂಭಿಸಿದರೆ ನೆರೆದಿದ್ದ ಸಭೆಕರಲ್ಲಿ ಶೋಷಣೆಯ ವಿರುದ್ದ ಸಿಟ್ಟು ಅಕ್ರೋಶಗಳು ಸ್ಪೋಟಗೊಳ್ಳುತ್ತಿದ್ದವು ಈ ಹಿನ್ನಲೆಯಲ್ಲಿ ಗದ್ದರ್ ಪೊಲೀಸರಿಗೆ ಟಾರ್ಗೆಟ್ ಅಗಿದ್ದರು, ಹಲವಾರು ಬಾರಿ ಪೊಲೀಸರ ದಾಳಿಯಲ್ಲಿ ಗದ್ದರ್ ಪಾರಾಗಿದ್ದರು, ಪೊಲೀಸರು ಮಾಡಿದ್ದ ಶೊಟ್‌ಔಟ್ ನಿಂದಾಗಿ ಅವರ ದೇಹದಲ್ಲಿ ಗುಂಡೊಂದು ಹೊರ ತೆಗೆಯಲಾಗದೆ ಶಾಶ್ವತವಾಗಿ ಉಳಿದು ಬಿಟ್ಟಿತ್ತು, ತೆಲಂಗಾನ ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಗದ್ದರ್ ಗುರುತಿಸಿ ಕೊಂಡಿದ್ದರು,
ಗದ್ದರ್ ಆಂದ್ರ ಪ್ರದೇಶ ಮಾತ್ರವಲ್ಲದೆ ಕರ್ನಾಟಕದಲ್ಲೂ ಹಲವಾರು ಚಳುವಳಿಗಳಲ್ಲಿ ಭಾಗವಹಿಸಿದ್ದರು. ಎಲ್ಲೇ ಶೋಷಣೆಗಳಾದರೂ ಅಲ್ಲಿ ಹಾಜರಾಗುತ್ತಿದ್ದರು, ಕೋಲಾರದ ಹುಣಿಸಿ ಕೋಟೆ ಪ್ರಕರಣದಲ್ಲಿ ಕೋಲಾರಕ್ಕೆ ಭೇಟಿ ನೀಡಿದ್ದರು, ತುರ್ತುಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಕೋಲಾರದಲ್ಲಿ ಪ್ರಪ್ರಥಮವಾಗಿ ಗುರುತಿಸಿ ಕೊಂಡಿದ್ದ ನೆನಪುಗಳನ್ನು ಹಿರಿಯ ದಲಿತ ನಾಯಕರು ಆಗಾಗ್ಗೆ ಮೆಲುಕು ಹಾಕುತ್ತಿರುತ್ತಾರೆ.
ಈ ಹಿಂದೆ ಕೋಲಾರ ಅವಿಭಜಿತ ಜಿಲ್ಲೆಯಲ್ಲಿ ಸಿ.ಪಿ.ಎಂ. ಮತ್ತು ಸಿ.ಪಿ.ಐ. ಪಕ್ಷಗಳು ಗದ್ದರ್ ಕ್ರಾಂತಿಕಾರಿ ಹಾಡುಗಳನ್ನು ಜನರ ಮುಂದಿಟ್ಟು ಪಕ್ಷವನ್ನು ಸಂಘಟಿಸುತ್ತಿದ್ದರು, ಮುಳಬಾಗಿಲಿನ ಮಾಜಿ ಶಾಸಕ ಆರ್.ವೆಂಕಟರಾಮಯ್ಯ, ಕೆ.ಜಿ.ಎಫ್ ಅರ್ಮುಗಂ, ಚಿನ್ನಸವರಿ ದಾಸ್ ,ಮಣಿ ಬಾಗೆಪಲ್ಲಿ ಶ್ರೀರಾಮರೆಡ್ಡಿ, ಮುಂತಾದವರು ಗದ್ದರ್ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ತಮ್ಮ ಕಾರ್ಯಕ್ರಮಗಳಿಗೂ ಆಹ್ವಾನಿಸುತ್ತಿದ್ದರು.ಹಾಗಾಗಿ ಗದ್ದರ್ ಅವರಿಗೂ ಕೋಲಾರಕ್ಕೂ ಅವಿನಭಾಜ್ಯ ಸಂಬಂಧ ಇತ್ತು.