ಗದಗ – ವಾಡಿ ರೈಲ್ವೆ ಮಾರ್ಗ ಸಂಪೂರ್ಣಗೊಳಿಸಲು ರೈಲ್ವೆ ಮಂತ್ರಿಗೆ ಮನವಿ

ರಾಯಚೂರು,ಮೇ.೧೯- ಗದಗ ವಾಡಿ ರೈಲ್ವೆ ಮಾರ್ಗವು ಕಿತ್ತೂರ ಕರ್ನಾಟಕದಿಂದ ಕಲ್ಯಾಣ ಕರ್ನಾಟಕ ಒಗ್ಗೂಡಿಸುವ ಮಾರ್ಗವಾಗಿದೆ.ಕರ್ನಾಟಕದ ರೈಲ್ವೆ ಸೌಲಭ್ಯ ಪಡೆಯದ ಎಷ್ಟೋ ಜನರಿಗೆ ರೈಲ್ವೆ ಸೇವೆ ಒದಗಿಸುವ ವಿಶಾಲ ಅಂದರೆ ೨೫೭ ಕೀ.ಮೀ. ಮಾರ್ಗವಾಗಿದೆ.
ಗದಗ-ವಾಡಿಗೆ ನೇರವಾಗಿ ಸಂಪರ್ಕ ಜೋಡಿಸುವ ಸರ್ವೇ ಬ್ರಿಟಿಷರ ಕಾಲದಲ್ಲಿ ಅಂದರೆ ೧೧೦ ವರ್ಷಗಳ ಹಿಂದೆ ಸಿದ್ದವಾಗಿತ್ತು. ಹೊಸ ರೈಲ್ವೆ ಮಾರ್ಗದ ನಿರ್ಮಾಣ ಒಪ್ಪಿಗೆ ೨೦೧೩ ಮತ್ತು ೧೪ರ ಲ್ಲಿ ಸಿಕ್ಕಿತ್ತು.ಕಳೆದ ೫ ವರ್ಷದಿಂದ ಕೆಲಸ ಭರದಿಂದ ಸಾಗಿದೆ.ಗದಗ ಕೊಪ್ಪಳ ಮಧ್ಯದಲ್ಲಿರುವ. ತಡಕಲ್ ಸ್ಟೇಷನನಿಂದ ಆರಂಭವಾಗಿ ಕುಕನೂರ, ಯಲಬುರ್ಗಾ, ಕುಷ್ಟಗಿ, ಲಿಂಗಸೂಗೂರ, ಗುರುಗುಂಟಾ, ಸುರಪುರ, ಶಹಪೂರ, ನರಬೋಲಿ ಮೂಲಕ ವಾಡಿ ತಲುಪುತ್ತದೆ.
ಹೈದ್ರಾಬಾದ, ಮುಂಬೈಗೂ ಇದು ಸಂಪರ್ಕ ಕಲ್ಪಿಸುತ್ತದೆ. ಲಿಂಗಸೂಗೂರ ಬಳಿ ಜಂಕ್ಷನ್ ಆಗುವ ಸಂಭವವಿದೆ. ಕಲ್ಬುರ್ಗಿ ಸುತ್ತಲಿನ ಸಿಮೆಂಟ ಪ್ಯಾಕ್ಟರಿ ಕಾರ್ಮಿಕರಿಗೆ ಮತ್ತು ಕೊಪ್ಪಳದ ಸುತ್ತಲಿನ ಗ್ರಾನೈಟ ಕಾರ್ಮಿಕರಿಗೆ ಇದು ರೈಲ್ವೆ ಸೇವೆ ಒದಗಿಸುತ್ತದೆ ಯೋಜನೆ ಬೇಗ ಮುಗಿಸಲು ಒತ್ತು ಕೊಡುವಂತೆ ರೈಲ್ವೆ ಮಂತ್ರಿ ಅಶ್ವೀನ್ ವೈಷ್ಣವ್‌ಗೆ ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ಒತ್ತಾಯಿಸಿದ್ದಾರೆ.