ಗದಗ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಭೀತಿ

ಗದಗ,ಮಾ28 : ಜಿಲ್ಲೆಯಲ್ಲಿ ಕೊರೋನಾ 2ನೇ ಅಲೆಕಾಣಿಸಿಕೊಂಡಿದ್ದು, ರೋಣ ಪಟ್ಟಣದ ಅಟಲ ಬಿಹಾರಿ ವಾಜಪೇಯಿ ಮಾದರಿ ವಸತಿ ಶಾಲೆಯ 4 ವಿದ್ಯಾರ್ಥಿನಿಯರು, 1 ಅಡುಗೆಯ ಸಿಬ್ಬಂದಿ ಸೇರಿ ಐವರಿಗೆ ಕೊರೋನಾ ಸೊಂಕು ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಸಾರ್ವಜನಿಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಕಳೆದ ಪೆಬ್ರವರಿಯಿಂದ ವಸತಿ ಶಾಲೆ ತರಗತಿಗಳು ಪ್ರಾರಂಭಗೊಂಡಿದ್ದು, ಶಾಲೆಗೆ ಬರುವಾಗ ವಿದ್ಯಾರ್ಥಿಗಳು ಕೊರೋನಾ ನೆಗಟಿವ್ ವರದಿ ತಂದಿದ್ದು, ಆ ಬಳಿಕವೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು.

233 ಗಂಟಲು ದ್ರವ ಮಾದರಿ ಸಂಗ್ರಹ : ಈ ರೀತಿ ಪ್ರತಕರಣಗಳು ಬೆಳಕಿಗೆ ಬರಿತ್ತಿದಂತೆ, ಶುಕ್ರವಾರ ಮತ್ತು ಶನಿವಾರ ಸೇರಿ ವಸತಿ ಶಾಲೆಯಲ್ಲಿದ್ದ 206 ವಿದ್ಯಾರ್ಥಿಗಳು, 16 ಶಿಕ್ಷಕ ಸಿಬ್ಬಂದಿ, 10 ಅಡುಗೆ ಸಿಬ್ಬಂದಿ, ಶುದ್ದ ನೀರು ಪೂರೈಕೆ ವಾಹನ ಚಾಲಕ ಸೇರಿ ಒಟ್ಟು 233 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಟೆಸ್ಟಗೆ ಕಳುಹಿಸಲಾಗಿದೆ. ಈ ಪೈಕಿ ಶನಿವಾರ ಒರ್ವ ಅಡುಗೆ ಸಿಬ್ಬಂದಿಗೂ ಕೊರೋನಾ ಸೋಂಕು ದೃಡಪಟ್ಟಿರುವದು ಸೇರಿ ಒಟ್ಟು 5 ಜನರಲ್ಲಿ ಸೋಂಕು ಪತ್ತೆಯಾಗಿದೆ .

ಆತಂಕದಲ್ಲಿ ವಿದ್ಯಾರ್ಥಿಗಳು, ಪಾಲಕರು : ಒಂದೇ ದಿನದಲ್ಲಿ 5 ಕೊರೋನಾ ಸೊಂಕು ದೃಡಪಡುತ್ತಿದಂತೆ, ಇನ್ನೂಳಿದ ವಿದ್ಯಾರ್ಥಿಗಳಲ್ಲಿ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ಪಾಲಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಸುದ್ದಿ ತಿಳಿದ ವಿದ್ಯಾರ್ಥಿಗಳ ಪಾಲಕರು ಶಾಲೆಯತ್ತ ದೌಡಾಯಿಸಿ, ತಮ್ಮ ಮಕ್ಕಳ ಆರೋಗ್ಯ ವಿಚಾರಿಸಿದ್ದಲ್ಲದೇ, ತಮ್ಮ ಮಕ್ಕಳನ್ನು ನಮ್ಮೊಂದಿಗೆ ಕಳುಹಿಸುವಂತೆ ವಸತಿ ಶಾಲೆಯ ವಾರ್ಡನ ಡಿ.ಎಚ್.ಅಣ್ಣಿಗೇರಿ, ಪ್ರಾಂಶುಪಾಲ ಎಂ.ಕೆ.ಕಪ್ಪರದಮಠ ಅವರಲ್ಲಿ ವಿನಂತಿಸಿದರು. ಸದ್ಯ ಈ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ ಗೆ ಸೇರಿಸಿದ್ದು, 7 ದಿನಗಳವರೆಗೆ ಯಾವದೇ ವಿದ್ಯಾರ್ಥಿಗಳು ಈ ಪ್ರದೇಶದಿಂದ ಆಚೆಗಡ ಹೋಗುವಂತಿಲ್ಲ. ನಿಮ್ಮ ಮಕ್ಕಳು ಆರೋಗ್ಯವಾಗಿದ್ದು, ಎಲ್ಲರ ಆರೋಗ್ಯ ಪರಿಕ್ಷೆ ನಡೆಸಲಾಗುತ್ತಿದೆ. ಪಾಲಕರು ಯಾವದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ತೀವ್ರ ಆತಂಕಕ್ಕೊಳಗಾದ ಪಾಲಕರಿಗೆ ಮನವರಿಕೆ ಮಾಡಲಾಯಿತು.
ಕಂಟೋನ್ಮೆಂಟ್ ಝೋನ್ ಘೋಷಣೆ : 5 ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿದಂತೆ ವಸತಿ ಶಾಲೆ ಇರುವ ಪ್ರದೇಶ, ಗುಲಗಂಜಿ ಮಠದ ಹಿಂದೆ, ವೀರಭದ್ರೇಶ್ವರ ದೇವಸ್ಥಾನ ಎದುರು ಇರುವ ಪ್ರದೇಶವನ್ನು ಜಿಲ್ಲಾಡಳಿತ ಕಂಟೋನ್ಮೆಂಟ್ ಝೋನ್ ( ನಿಷೇದಿತ ಪ್ರದೇಶ) ಎಂದು ಘೋಷನೆ ಮಾಡಿ, ಆ ಪ್ರದೇಶದಲ್ಲಿ ನಾಮ ಫಲಕ ಅಳವಡಿಸಿದೆ. ಶಾಲೆ ಆವರಣ, ತರಗತಿ ಕೊಣೆ, ವಸತಿ ಗೃಹ, ಸಿಬ್ಬಂದಿ ಕೊಠಡಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಪುರಸಭೆಯಿಂದ ಸ್ಯಾನಿಟೆಸರ ಮಾಡಲಾಯಿತು.

ಭಾಕ್ಸ್ ಮಾಡಿಕೊಳ್ಳಿ :
ಶಾಲೆ ಅವ್ಯವಸ್ಥೆ ವಿರುದ್ದ ಪಾಲಕರ ಆಕ್ರೋಶ : ವಸತಿ ಶಾಲೆ ನೂತನ ಕಟ್ಟಡ ಕಾಮಗಾರಿ ಕಳೆದ 5 ವರ್ಷದಿಂದ ಆಮೆಗತಿಯಲ್ಲಿ ಸಾಗಿದ್ದು, ಈವರೆಗೂ ಪೂರ್ಣಗೊಳ್ಳದ್ದರಿಂದ ಕಳೆದ 6 ವರ್ಷದಿಂದ ಪಟ್ಟಣದ ಗುಲಗಂಜಿ ಮಠದ ಕಟ್ಟಡದಲ್ಲಿ ವಸತಿ ಶಾಲೆ ನಡೆಸಲಾಗುತ್ತಿದ್ದು, ಇಕ್ಕಟ್ಟಾದ ಕೋಣೆ ಇರುವದರಿಂದ ವಿದ್ಯಾರ್ಥಿಗಳು ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗುತ್ತಿಲ್ಲ. ಶೌಚಾಲಯ, ಸ್ನಾನದ ಕೊಠಡಿ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ನೂತನ ಕಟ್ಟಡಕ್ಕೆ ಶಾಲೆ ಸ್ಥಳಾಂತರಿಸಬೇಕು.ಇಲ್ಲವಾದಲ್ಲಿ ನಮ್ಮ ಮಕ್ಕಳನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗುತ್ತೆವೆ. ನಮಗೆ ನಮ್ಮ ಮಕ್ಕಳ ಆರೋಗ್ಯ ಮುಖ್ಯವಾಗಿದೆ. ದಿಡೀರ್ ಈ ರೀತಿ ಕಾಯಿಲೆಗೆ ನಮ್ಮ ಮಕ್ಕಳು ತುತ್ತಾದಲ್ಲಿ ಯಾರು ಹೊಣೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ವಿದ್ಯಾರ್ಥಿಗಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.