ಗಣ್ಯರಿಂದ  ಕಂಚಿನ ಪ್ರತಿಮೆಗೆ ಮಾಲಾರ್ಪಣೆ

ದಾವಣಗೆರೆ, ಫೆ. 24: ದಾಸಶ್ರೇಷ್ಠ ಕನಕದಾಸರ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾ ಹೋರಾಟ ಸಮಿತಿಯಿಂದ ಕನಕದಾಸರ ರಥಯಾತ್ರೆ ಶುಕ್ರವಾರ ನಗರಕ್ಕೆ ಆಗಮಿಸಿತು.ಇಲ್ಲಿನ ಪಿ.ಬಿ.ರಸ್ತೆಯ ಬಿಎಸ್‌ಎನ್‌ಎಲ್ ಕಚೇರಿ ಸಮೀಪ ಇರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಮಹಾರಾಷ್ಟçದ ಸೊಲ್ಲಾಪುರದಿಂದ ದಾಸಶ್ರೇಷ್ಠ ಭಕ್ತ ಕನಕದಾಸರ 7 ಅಡಿ 2 ಇಂಚು ಅಳತೆಯ ಕಂಚಿನ ಪ್ರತಿಮೆ ಆಗಮಿಸಿದ್ದು, ಸಮಿತಿ ಪದಾಧಿಕಾರಿಗಳು, ನಗರದ ಸದ್ಭಕ್ತರು ಭಕ್ತಿಪೂರ್ವಕವಾಗಿ ಸ್ವಾಗತ ಮಾಡಿ ಪೂಜೆ ಸಲ್ಲಿಸಿ ಬೃಹತ್ ಮಾಲಾರ್ಪಣೆ ಮಾಡಿದರು.ಮಹಾನಗರ ಪಾಲಿಕೆ ಮಹಾಪೌರರಾದ ಜಯಮ್ಮ ಗೋಪಿನಾಯ್ಕ ಪುಷ್ಪ ಅರ್ಪಿಸಿ ರಥ ಯಾತ್ರೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರು, ಪಾಲಿಕೆ ಸದಸ್ಯರಾದ ಜೆ.ಡಿ.ಪ್ರಕಾಶ, ಕಾರ್ಯದರ್ಶಿ ಪಿ.ಜೆ.ರಮೇಶ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಶಿವಣ್ಣ ಮಾಸ್ಟರ್, ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ, ಆಶಾ ಉಮೇಶ, ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ ಮಂಜುನಾಥ, ಸಮಾಜದ ಮುಖಂಡರಾದ ಕೋಳೇನಹಳ್ಳಿ ಬಿ.ಎಂ.ಸತೀಶ, ಸಿ.ವೀರಣ್ಣ, ಜೆ.ಸಿ.ನಿಂಗಣ್ಣ, ಅದಾನಿ ಸಿದ್ದಣ್ಣ, ಚೌಡಪ್ಪ, ತಾಲೂಕು ಫೋಟೋಗ್ರಾರ‍್ಸ್ ಸಂಘದ ಅಧ್ಯಕ್ಷ ಎಂ.ಮನು, ಉಪಾಧ್ಯಕ್ಷ ಚಂದ್ರಶೇಖರ ಎಸ್, ಜಮ್ನಳ್ಳಿ ನಾಗರಾಜ, ಡಾ.ಕರಿಬಸಪ್ಪ ಗಂಗನರಸಿ, ಬೀರಪ್ಪ, ಸಲಳ್ಳಿ ಹನುಮಂತಪ್ಪ, ಮಲ್ಲೇಶ, ಚೇತನ್ ಸೇರಿದಂತೆ ಇತರರು ಭಾಗವಹಿಸಿದ್ದರು.