ಗಣೇಶ ಹಬ್ಬದವರೆಗೆ ನಂದಿನಿ ಸಿಹಿ ಉತ್ಸವ :ಶೇ. 20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ

ಅಥಣಿ : ಆ.20:ಸ್ವಾತಂತ್ರ್ಯ ದಿನಾಚರಣೆ ದಿನದಿಂದ ಬರುವ ಗಣೇಶ್ ಹಬ್ಬದವರಿಗೆ ಕೆಎಂಎಫ್ ನಂದಿನಿ ಸಿಹಿ ಉತ್ಸವವನ್ನು ರಾಜ್ಯದ್ಯಂತ ಹಮ್ಮಿಕೊಳ್ಳಲಾಗಿದ್ದು, ಹಬ್ಬದ ದಿನಗಳಲ್ಲಿ ಗ್ರಾಹಕರು ಇದರ ಸಲುಪಯೋಗ ಪಡೆದುಕೊಳ್ಳಬೇಕು ಎಂದು
ಕೆಎಂಎಫ್ ಸಂಸ್ಥೆಯ ಬೆಳಗಾವಿ ಜಿಲ್ಲಾ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ ಹೇಳಿದರು.
ಅವರು ಅಥಣಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕೆಎಂಎಫ್ ನಂದಿನಿ ಸಿಹಿ ಉತ್ಪನ್ನಗಳ ಅಧಿಕೃತ ಮಾರಾಟ ಮಳಿಗೆಯಲ್ಲಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಎಂಎಫ್ ಸಂಸ್ಥೆ ರೈತರಿಗೆ ಜೀವನಾಡಿಯಾಗಿದೆ. ರೈತರು ಕೃಷಿಯೊಂದಿಗೆ ಮಾಡುತ್ತಿರುವ ಹೈನುಗಾರಿಕೆಗೆ ಪೆÇ್ರೀತ್ಸಾಹ ಧನ ನೀಡುತ್ತಿರುವ ಸರ್ಕಾರದ ಏಕೈಕ ಅಂಗ ಸಂಸ್ಥೆಯಾಗಿದೆ. ಈ ಸಂಸ್ಥೆಯ ಮೂಲಕ ರಾಜ್ಯದ ಜನತೆಗೆ ಶುದ್ಧ ಹಾಲು ಮತ್ತು ಅದರ ಉತ್ಪನ್ನಗಳನ್ನು ಮತ್ತು ಸಿಹಿ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಬರುವ ಸೆ?????ಂಬರ್ 20ರವರೆಗೆ ನಂದಿನಿ ಸಿಹಿ ಉತ್ಸವದಲ್ಲಿ ಶೇ. 20 ರಷ್ಟು ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತದೆ. ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲೂಕಾ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಮಾತನಾಡಿ ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳು ಮತ್ತು ಸಿಹಿ ಪದಾರ್ಥ ಯಾವುದೇ ಕಲಬೆರಿಕೆ ರಹಿತ ಉತ್ಪನ್ನಗಳಾಗಿವೆ. ಇವುಗಳ ಸೇವನೆಯಿಂದ ಆರೋಗ್ಯಕ್ಕೆ ಉತ್ತಮವಾಗಿದ್ದು, ಸರ್ಕಾರ ರಿಯಾಯಿತಿ ದರದಲ್ಲಿ ನೀಡುತ್ತಿರುವ ಈ ಉತ್ಪನ್ನಗಳನ್ನು ಗ್ರಾಹಕರು ಪಡೆದುಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೆಎಂಎಫ್ ಜಿಲ್ಲಾ ನಿರ್ದೇಶಕ ಅಪ್ಪಸಾಹೇಬ ಅವತಾಡೆ, ಸಮಾಜ ಸೇವಕ ರಾಮನಗೌಡ ಪಾಟೀಲ, ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ, ಸಾಮಾಜಿಕ ಕಾರ್ಯಕರ್ತ ಪ್ರದೀಪ ನಂದಗಾಂವ, ನಂದಿನಿ ಉಪ ಕೇಂದ್ರದ ಅಧಿಕಾರಿ ಸಂಜೀವ ತಳವಾರ, ತಾಲೂಕ ವಿಸ್ತರಣಾ ಅಧಿಕಾರಿ ಸಂತೋಷ್ ಗವಾನೆ, ಅಧಿಕೃತ ಮಾರಾಟಗಾರ ಶ್ರೀನಿವಾಸ ಪಟ್ಟಣ ಸೇರಿದಂತೆ ಪ್ರಸಾದ ವಾಘಮೋರೆ, ಅಕ್ಷಯ ಸಾಳ್ವೆ, ಗಜಾನನ ಬೋರಾಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.