ಗಣೇಶ ವಿಸರ್ಜನೆ

ಔರಾದ : ಸೆ.24:ತಾಲೂಕು ವಕೀಲರ ಸಂಘದ ವತಿಯಿಂದ ಪ್ರತಿಷ್ಠಾಪಿತ ಗಣೇಶ ಮೂರ್ತಿ ನಿನ್ನೆ ವಿಸರ್ಜನೆ ಮಾಡಲಾಯಿತು.

ವಿಘ್ನ ನಿವಾರಕ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ವಕೀಲ ಸಂಘದ ಸದಸ್ಯರು ಮೆರವಣಿಗೆ ಮೂಲಕ ಪಟ್ಟಣದ ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡಿದರು. ಈ ಸಂದರ್ಭದಲ್ಲಿ ವಿಜಯಕುಮಾರ ಜಾಧವ, ಸಂದೀಪ ಮೇತ್ರೆ, ರಮೇಶ ಅಲ್ಮಾಜೆ, ಸಂತೋಷ ಉಪ್ಪೆ, ಬಾಲಾಜಿ ಕುಂಬಾರ, ರವಿಕಾಂತ ನೌಬಾದೆ, ವಿದ್ಯಾಸಾಗರ ಉಪ್ಪೆ, ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.