ಗಣೇಶ ವಿಸರ್ಜನೆ

ಸಂಜೆ ವಾಣಿ ವಾರ್ತೆ
ಕೊಟ್ಟೂರು ಸೆ 12 :ಪಟ್ಟಣದ ಹಿರೇಮಠದಲ್ಲಿ ಸ್ಥಾಪಿಸಿದ ಗಣೇಶ ಮೂರ್ತಿಯನ್ನು ಸಕಲ ಬಿರುದಾವಳಿ,ಬೆಳ್ಳಿಯ ಪಲ್ಲಕ್ಕಿಯಲ್ಲಿ ವಿವಿಧ ಮಂಗಲವಾಧ್ಯ ಗಳೊಂದಿಗೆ ಮೇರವಣಿಗೆಯ ಮೂಲಕ  ಶನಿವಾರ ಸಂಜೆ ವಿಸರ್ಜನೆ ಮಾಡಲಾಯಿತು.
ಸಂಪ್ರದಾಯದಂತೆ ಶುಕ್ರವಾರ ಸಂಜೆ 3.30ಕ್ಕೆ ಸ್ಥಾಪನೆಮಾಡಿ24ತಾಸುಗಳಲ್ಲಿ ಅಂದರೆ ಶನಿವಾರ ಸಂಜೆ ಹಿರೇಮಠದಿಂದ ಮೇರವಣಿಗೆಯ ಮೂಲಕ ಕೆಳಗೇರಿಯ ಆಂಜನೇಯ ದೇವಸ್ಥಾನದ ಬಳಿಯ ಮಠದ ಬಾವಿಯಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಧಾನ ಧರ್ಮಕರ್ತ ಸಿಹೆಚ ಎಂ. ಗಂಗಾಧರಯ್ಯ, ಸಿಹೆಚ್ ಎಂ.ಸೋಮಣ್ಣ,
ಪ್ರದೀಪ, ಕಾರ್ತಿಕ ಮೇರವಣಿಗೆಯಲ್ಲಿ ಪಲ್ಗೊಂಡಿದ್ದರು.