ಗಣೇಶ ವಿಸರ್ಜನೆ : ೫೦೦ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ರಾಯಚೂರು, ಸೆ.೫ – ಗಣೇಶ ಚತುರ್ಥಿ ಅಂಗವಾಗಿ ೫ ದಿನಗಳ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ನವಯುವಕ ಸಂಘ ಮತ್ತು ಬಾಲ ಆಂಜಿನಯ್ಯ ದೇವಸ್ತಾನ ಸಮಿತಿ ಮಂಗಳವಾರಪೇಟೆ ವತಿಯಿಂದ ೫೦೦ ವಿದ್ಯಾರ್ಥಿಗಳಿಗೆ ಪುಸ್ತಕಗಳು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್,ಜೆಡಿಎಸ್ ಮುಖಂಡ ರಾಮನಗೌಡ ಏಗನೂರು,ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್ , ಕಡಗೊಳ್ ಅಂಜಿನಯ್ಯ ,ಹರೀಶ್ ನಾಡಗೌಡ,ಕಾಂಗ್ರೆಸ್ ಜೆಡಿಎಸ್ ಮುಖಂಡರು ಹಾಗೂ ಅಂಬೇಡ್ಕರ್ ನವಯುವಕ ಸಂಘದ ಮುಖಂಡರು ಮಂಗಳವಾರಪೇಟೆ ಹಿರಿಯ ನಾಗರಿಕರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.