ಗಣೇಶ ಮೂರ್ತಿ ಪ್ರತಿಷ್ಠಾಪನೆ ಅನುಮತಿ ಕಡ್ಡಾಯ

ಜಗಳೂರು.ಸೆ.೬; ಪಟ್ಟಣದ ತಾಲೂಕು ಪಂಚಾ ಯಿತಿ ಸಭಾಂಗಣ ದಲ್ಲಿ 18 ರಂದು ನಡೆಯಲಿರುವ ಗಣೇಶ ಹಬ್ಬ ದ ಹಾಗೂ 28 ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ  ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಪಟ್ಟಣ ವಾರ್ಡ್ ಹಾಗೂ ಗ್ರಾಮೀಣ ಭಾಗದ ಗ್ರಾಮಗಳಲ್ಲಿ ನಿಮ್ಮ ಏರಿಯಗಳಲ್ಲಿ ಮತ್ತು ಬೀದಿಗಳಲ್ಲಿ ಎಲ್ಲೇ ಗಣೇಶ ಮೂರ್ತಿಯನ್ನು ಕೂರಿಸಬೇಕಾದರೆ ಗಣೇಶ ಮೂರ್ತಿ ಕುರಿಸುವ ಜಾಗದ ಪರ್ಮಿ ಷನ್ ಹಾಗೂ ವಿದ್ಯುತ್.ಧ್ವನಿವರ್ಧಕ ಹಾಗೂ ಅಗ್ನಿಶಾಮಕ ಠಾಣೆ ಯಿಂದ ಪರ್ಮಿಷನ್ ತೆಗೆದುಕೊಳ್ಳ ಬೇಕು ಎಂದರು ಗಣೇಶ ಹಬ್ಬ ವನ್ನು ಆಚರಿಸಿ ಕೊಳ್ಳಬಹುದು ಒಂದು ವೇಳೆ ಪರ್ಮಿಷನ್ ತೆಗೆದು ಕೊಳ್ಳದೆ ಗಣೇಶ ಮೂರ್ತಿಯನ್ನು ಕೂರಿಸಿದರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್ ತಿಳಿಸಿದರು.ಯಾವುದೇ ಕಾರಣಕ್ಕೂ ಪಿ.ಒ.ಪಿ ಗಣೇಶ ಮೂರ್ತಿಯನ್ನು ಕೂರಿಸ ಬಾರದು :- ಪರಿಸರ ಸ್ನೇಹಿಯಾದ ಮಣ್ಣಿನ ಗಣೇಶ ಮೂರ್ತಿ ಕೂರಿಸ ಬೇಕು ಗಣೇಶ ಉತ್ಸವದಲ್ಲಿ ಅಥವಾ ಮೆರವಣಿಗೆ ವೇಳೆ  ಡಿ.ಜಿ ಸೌಂಡ್ ಹಾಕಿದರೆ 5 ಲಕ್ಷ ತಂಡ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸ ಬೇಕಾಗುತ್ತದೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡು ವಾಗ ಆಯೋಜಕರು ಪಟ್ಟಣ ಪಂಚಾಯಿತಿ ಅಥವಾ ಗ್ರಾಮ ಪಂಚಾಯಿತಿಗಳು ಗುರುತಿಸಿದ ಸ್ಥಳದಲ್ಲಿ ಮೂರ್ತಿಯನ್ನು ವಿಸರ್ಜನೆ ಮಾಡ ಬೇಕಾಗುತ್ತದೆ ಗಣೇಶ ಮೂರ್ತಿ ಮೆರವಣಿಗೆಯ ವೇಳೆಯಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಫೋಟೋ.ವಿಡಿಯೋ.ಸುಳ್ಳು ಸುದ್ದಿಗಳನ್ನು ಹಂಚಿಕೊಂಡರು ಸಹ ಅಂಥವರ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಹಸಿಲ್ದಾರ್ ಅರುಣ್ ಕುಮಾರ್ ಕಾರಗಿ. ಪಿ.ಎಸ್.ಐ ಮಂಜುನಾಥ ಸ್ವಾಮಿ. ಬೆಸ್ಕಾಂ ಎಇಇ ಸುಧಾ ಮಣಿ. ಪ.ಪಂ ಮುಖ್ಯಾಧಿಕಾರಿ ಲೋಕ್ಯ ನಾಯ್ಕ್. ಮುಖಂಡರಾದ ಮಾಜಿ ನಾಯಕ ಸಮಾಜದ ಕಾರ್ಯದರ್ಶಿ ಲೋಕೇಶ್.ಬಿದರಿಕೆರೆ ರವಿ ಕುಮಾರ್ .ಕಸ್ತೂರಿ ಪುರ ಶಿವಣ್ಣ.ಮುಸ್ಲಿಂ ಸಮುದಾಯದ ಮುಖಂಡರಾದ ಇಕ್ಬಾಲ್ ಅಹಮದ್. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಂಜುಂಡಸ್ವಾಮಿ ಬಣದ ಅಧ್ಯಕ್ಷ .ಬಸವರಾಜಪ್ಪ.ತಿಪ್ಪೇಶಿ.ರೈತ ಸಂಘ ಜಿಲ್ಲಾ ಕಾರ್ಯದರ್ಶಿ ರಾಜು. ಬಾಲರಾಜ್. ವೆಂಕಟೇಶ. ಯೋಗನಂದ. ಶಟ್ಟಿಗೊಂಡನಹಳ್ಳಿ ರಾಜು. ಪೊಲೀಸ್ ಸಿಬ್ಬಂದಿಗಳಾದ ಮಾರುತಿ. ನಾಗಭೂಷಣ್. ಮಾರೆಪ್ಪ. ಬಸವರಾಜ್. ಸೇರಿದಂತೆ ಗಣೇಶ ಮೂರ್ತಿ ಆಯೋಜಕರು ಇದ್ದರು.