ಗಣೇಶ ಮೂರ್ತಿ ತಿದ್ದುವ ಕಾಯಕದಲ್ಲಿ ಮಹಿಳೆಯರು

ಹುಬ್ಬಳ್ಳಿ, ಅ.೨೩- ಕಾಯಕವೇ ಕೈಲಾಸ ಎಂಬ ಬಸವಣ್ಣನವರ ನುಡಿಮುತ್ತು ಎಲ್ಲ ಧರ್ಮಕ್ಕೂ ಅನ್ವಯಿಸುತ್ತದೆ.
ಜಾತಿ-ಧರ್ಮಗಳ ಹಂಗು ಕಳಚಿ ಸಾಮರಸ್ಯದ ಭಾವೈಕ್ಯದ ನಕ್ಷತ್ರ ಹೊಳೆಯುವಂತೆ ಗಣಪನ ಮೂರ್ತಿಯನ್ನು ತಿದ್ದುತ್ತಿರುವ ಈ ಮಹಿಳೆಯನ್ನು ಕಂಡಾಗ ಧನ್ಯತಾ ಭಾವ ಉಂಟಾಗುತ್ತದೆ.ಸಾಮರಸ್ಯದ ಭಾವ ಬೆಳಗುತ್ತದೆ.
ಈ ಅಲ್ಪಸಂಖ್ಯಾತ ಮಹಿಳೆಗೆ ಗಣೇಶ ಮೂರ್ತಿಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದು ಮುಖ್ಯ ಜೀವನಾಧಾರವಾಗಿದೆ. ಅವಳ ಕೌಶಲ್ಯಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ-ಹಂಗಿಲ್ಲ . ಹುಬ್ಬಳ್ಳಿಯ ಈ ಮುಸ್ಲಿಂ ಮಹಿಳೆ ಕಳೆದ ೨ ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಪರಿಣತಿ ಹೊಂದಿದ್ದು, ಪ್ರತಿ ವರ್ಷ ಮಳೆಗಾಲದ ಆರಂಭಕ್ಕೂ ಮುನ್ನವೇ ಮೂರ್ತಿ ನಿರ್ಮಾಣ ಕಾರ್ಯ ಆರಂಭವಾಗುತ್ತದೆ.
ವಿಗ್ರಹ ತಯಾರಕ ನಿರುಪಮಾ ಯಾದವ್ ಅವರ ಸಹಾಯಕರಾಗಿ ಸುಮನ್ ಕೆಲಸ ಮಾಡುತ್ತಿದ್ದಾರೆ. ಇವರೊಂದಿಗೆ ಇನ್ನಿಬ್ಬರು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅವರು ವಿಗ್ರಹಕ್ಕೆ ಆಭರಣ ವಿನ್ಯಾಸ ಮತ್ತು ಅಂತಿಮ ಸ್ಪರ್ಶವನ್ನು ನೀಡುತ್ತಾರೆ. ಗಣೇಶನ ವಿಗ್ರಹ ನಿಷೇಧದ ನಂತರ ಪ್ಲಾಸ್ಟರ್ ಆಫ್ ಪ್ಯಾರಿಸ್ ಪೇಪರ್ ವಿಗ್ರಹಗಳನ್ನು ತಯಾರಿಸಲು ಪ್ರಾರಂಭಿಸಿತು. ಮುಸ್ಲಿಂ ಸಮುದಾಯದ ಮಹಿಳೆ ಸೇರಿದಂತೆ ವಿವಿಧ ಸಮುದಾಯದ ಆರು ಮಂದಿ ಕೆಲಸ ಮಾಡುತ್ತಿದ್ದಾರೆ ಎನ್ನುತ್ತಾರೆ ನಿರುಪಮಾ ಯಾದವ್.
ಗಣೇಶ ಹಿಂದೂಗಳ ದೃಷ್ಟಿಯಲ್ಲಿ ದುಷ್ಟ ವಿನಾಶಕ. ಅನ್ಯ ಧರ್ಮೀಯರಿಂದ ವಿಘ್ನ ನಿವಾರಕನ ಪೂಜೆ ಅಷ್ಟಕ್ಕಷ್ಟೇ.
ಆದರೆ ಮುಸ್ಲಿಂ ಮಹಿಳೆಯೊಬ್ಬರು ವಿಘ್ನ ನಿವಾರಕ ಸೇವೆಯಲ್ಲಿ ತೊಡಗಿದ್ದಾರೆ. ಮುಸ್ಲಿಂ ಮಹಿಳೆಯರಿಂದ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಹುಬ್ಬಳ್ಳಿಯ ಗೋಪನಕೊಪ್ಪದಲ್ಲಿ ಗಣೇಶ ಮೂರ್ತಿ ತಯಾರಿಕೆ ಕಾರ್ಯ ಭರದಿಂದ ಸಾಗಿದೆ. ಗೌರಿ ಗಣೇಶ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಹುಬ್ಬಳ್ಳಿಯಲ್ಲಿ ಗಣೇಶ ಮೂರ್ತಿ ತಯಾರಿಕೆ ಕಾರ್ಯ ಭರದಿಂದ ಸಾಗಿದೆ. ಗೋಪನಕೊಪ್ಪದಲ್ಲಿ ವಿವಿಧ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಮುಸ್ಲಿಂ ಮಹಿಳೆಯೊಬ್ಬರು ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ.
ಮುಸ್ಲಿಂ ಮಹಿಳೆಯರು ಗಣೇಶ ಮೂರ್ತಿ ತಯಾರಿಸಿ ಗಮನ ಸೆಳೆಯುತ್ತಿದ್ದಾರೆ. ಮುಸ್ಲಿಂ ಮಹಿಳೆಯೊಬ್ಬರು ಆಕರ್ಷಕ ಮೂರ್ತಿಗಳನ್ನು ತಯಾರಿಸಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾರೆ.
ಸುಮನ್ ಹಾವೇರಿ ಹಿಂದೂ ದೇವರ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದರು. ಸುಮನ್ ಅವರ ಕೈಚಳಕಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೋಪನಕೊಪ್ಪದ ಅರುಣ್ ಯಾದವ್ ಬಳಿ ಮುಸ್ಲಿಂ ಮಹಿಳೆಯೊಬ್ಬರು ಕೆಲಸ ಮಾಡುತ್ತಾರೆ. ಅರುಣ್ ಕಳೆದ ಹದಿನೈದು ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಇದೀಗ ಅವರ ಪುತ್ರ ಅನೂಪ್ ಯಾದವ್ ಹಾಗೂ ಪತ್ನಿ ನಿರುಪಮಾ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.
ಪಿಒಪಿ ನಿಷೇಧಿಸಿದ ಬಳಿಕ ಗುಜರಾತ್ ನ ಪೋರಬಂದರ್ ನಿಂದ ಮಣ್ಣು ತಂದು ವಿಶೇಷ ಮೂರ್ತಿಗಳನ್ನು ತಯಾರಿಸಲಾಗಿದೆ. ಕಡಿಮೆ ತೂಕದ, ಕ್ರ್ಯಾಕ್ ಪ್ರೂಫ್ ಪೇಪರ್ ಬಳಸಿ ಸುಂದರವಾದ ಗಣೇಶನ ವಿಗ್ರಹವನ್ನು ತಯಾರಿಸಲಾಗುತ್ತದೆ. ೪ ವರ್ಷಗಳ ಹಿಂದೆ ಸುಮನ್ ಹಾವೇರಿ ಅರುಣ್ ಕೆಲಸಕ್ಕೆ ಸೇರಿದ್ದರು. ಅರುಣ್ ಯಾದವ್ ಅವರಿಂದಲೇ ಗಣೇಶ ಮೂರ್ತಿಗಳನ್ನು ತಯಾರಿಸುವುದನ್ನು ಸುಮನ್ ಗೆ ಹೇಳಿಕೊಟ್ಟಿದ್ದರು.
ಒಂದು ಅಡಿಯಿಂದ ಎಂಟು ಅಡಿವರೆಗೆ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಧರ್ಮ ಮೀರಿ ಸುಮನ್ ಗಣೇಶ ಮೂರ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿಯೂ ಮೂಷಕ ವಾಹನ ಮತ್ತು ಮೋದಕ ಹಸ್ತಾನ ಉತ್ಸವದ ಸಿದ್ಧತೆಗಳು ಭರದಿಂದ ಸಾಗಿವೆ.
ವಿಗ್ರಹಗಳಿಗೆ ಅಲಂಕಾರ ಮಾಡಿ ಅಂತಿಮ ಸ್ಪರ್ಶ ನೀಡುವಲ್ಲಿ ಸುಮನ್ ನಿಪುಣರು. ವಿವಿಧ ಜಾತಿ ಮತ್ತು ಧರ್ಮದ ಜನರು ಇಲ್ಲಿ ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ.