ಗಣೇಶ ಮಹಾ ಮಂಡಳ ವತಿಯಿಂದ ಸಚಿವ ಭಗವಂತ ಖೂಬಾ ಅವರಿಗೆ ಅಮಂತ್ರಣ

ಬೀದರ: ಸೆ. 4 ರಂದು ನಡೆಯುವ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ನವೀಕರಿಸಬಹುದಾದ ಇಂಧನ, ರಾಸಾಯನಿಕ ಹಾಗೂ ರಸಗೊಬ್ಬರ ಕೇಂದ್ರ ರಾಜ್ಯ ಸಚಿವರಾದ ಭಗವಂತ ಖೂಬಾ ಅವರನ್ನು ಗಣೇಶ ಮಹಾ ಮಂಡಳಿಯ ವತಿಯಿಂದ ಅಧಕ್ಷರಾದ ಚಂದ್ರಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿಯಾದ ಬಾಬು ವಾಲಿ ಅಧಿಕೃತ ಅಮಂತ್ರಣ ನೀಡಿದರು.

ಈ ಅಮಂತ್ರಣಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ರಾಜ್ಯ ಸಚಿವರು ಸೆ. 4 ರವರೆಗೆ ಜಿಲ್ಲೆಯಲ್ಲೇ ಇರಲ್ಲಿದ್ದು ಬರುವುದಾಗಿ ಭರವಸೆ ನೀಡಿದರು. ಈ ಸಂಧರ್ಭದಲ್ಲಿ ಮೆರವಣಿಗೆ ಸಮಿತಿಯ ಗೌರವಧ್ಯಕ್ಷರಾದ ಸೂರ್ಯಕಾಂತ ಶೆಟ್ಟಕಾರ, ಗುರುನಾಥ ಕೊಳ್ಳುರು, ಕೋಶಾಧ್ಯಕ್ಷರಾದ ರಜನೀಶ ವಾಲಿ, ಉಪಾಧ್ಯಕ್ಷರಾದ ದೀಪಕ ವಾಲಿ, ಶಶಿ ಹೊಸಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.