
ಕಲಬುರಗಿ,ಸೆ.14:2023ನೇ ಸಾಲಿನ ಶ್ರೀ ಗಣೇಶ ಹಬ್ಬದ ಪ್ರಯುಕ್ತ ಒಂದೇ ಸೂರಿನಡಿ ಅನುಮತಿ ಪಡೆಯಲು (ಪಾಲಿಕೆಯ ವತಿಯಿಂದ) ಕಲಬುರಗಿ ನಗರದ ಇಂದಿರಾ ಸ್ಮಾರಕ ಭವನ (ಟೌನ್‍ಹಾಲ್) ದಲ್ಲಿರುವ “ಏಕಗವಾಕ್ಷಿ” ವೇದಿಕೆ ಮೂಲಕ 2023ರ ಸೆಪ್ಟೆಂಬರ್ 15 ರಿಂದ ನಿರಾಪೇಕ್ಷಣಾ ಪತ್ರ ನೀಡಲಾಗುತ್ತಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಕಲಬುರಗಿ ನಗರದ ಇಂದಿರಾ ಸ್ಮಾರಕ ಭವನ (ಟೌನ್‍ಹಾಲ್) ದಲ್ಲಿರುವ “ಏಕಗವಾಕ್ಷಿ” ವೇದಿಕೆ ಮೂಲಕ ಗಣೇಶ ಉತ್ಸವದ ನಿರಾಪೇಕ್ಷಣಾ ಪತ್ರವನ್ನು ಕಚೇರಿ ಸಮಯದಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನೀಡಲಾಗುತ್ತಿದ್ದು, ಕಲಬುರಗಿ ನಗರದ ಗಣೇಶ ಮಂಡಳಿಯವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.