
ಕಲಬುರಗಿ: ಸೆ.14: ಸಮಾಜದ ಶಾಂತಿ ಸುವ್ಯವಸ್ಥೆ ಸೌಹರ್ದಯುತವಾಗಿದ್ದರೆ ಸಮಾಜವು ಅಭಿವೃದ್ಧಿ ಹೊಂದಲು ಸಾಧ್ಯವಾಲಿದೆ.ಈ ನಿಟ್ಟಿನಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ ಹಬ್ಬವನ್ನು ಶಾಂತಿ ಹಾಗೂ ಸೌಹರ್ದಯುತವಾಗಿ ಆಚರಣೆ ಮಾಡಬೇಕೆಂದು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಗಣೇಶ ಚತುರ್ಥಿ ಹಬ್ಬವನ್ನು ಹಾಗೂ ಈದ-ಮಿಲಾದ ಹಬ್ಬದ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಸಾರ್ವಜನಿಕರು ಸಮಾಜ ಮುಖಂಡರು ಎಲ್ಲರ ಸಹಕಾರದಿಂದ ಎರಡು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಗಣೇಶ ಚತುರ್ಥಿ ಸಂದರ್ಭದಲ್ಲಿ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
5 ದಿನಗಳ ವಿಸರ್ಜನೆ, 9 ದಿನಗಳ ವಿಸರ್ಜನೆ, ಹಾಗೂ 11 ದಿನಗಳ ವಿಸರ್ಜನೆ ಯಾವುದೆ ಅಡ್ಡೆ ತಡೆಗಳನ್ನು ಆಗಕೂಡದು. ಜಿಲ್ಲೆಯಲ್ಲಿ ಡಿ.ಜೆ. ರಾತ್ರಿ 10 ಗಂಟೆಯವರೆಗೆ ಅನುಮತಿ ಪಡೆಯಬೇಕಾದರೆ ಪೆÇಲೀಸ ಇಲಾಖೆಯಿಂದ ಅನುಮತಿ ಪಡೆಯಬೇಕು ಯಾರಿಗೂ ತೊಂದರೆಯಾಗದಂತೆ ಆಚರಿಸಬೇಕು ಕೆಲವೊಬ್ಬರು ಅನಾರೋಗ್ಯದ ಬಳಲುತ್ತಿರುತ್ತಾರೆ ವೃದ್ದರು ಮಕ್ಕಳು ಓದುವ ಸಂದರ್ಭ ಇರುತ್ತದೆ ಯಾರಿಗೂ ಆಡಚಣೆಯಾಗಲಾರದ ರೀತಿಯಲ್ಲಿ ಆಚರಣೆ ಮಾಡಬೇಕೆಂದರು.
ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗಣೇಶ ಚರ್ತುಥಿ ಹಬ್ಬವನ್ನು ಆಚರಿಸುತ್ತಿದ್ದೇವೆ ಸಂತೋಷ ಸಂಗತಿ ಗಣೇಶ ಚತುರ್ಥಿ ಸ್ಥಾಪಿಸಿರುವ ಸಂದರ್ಭಧಲ್ಲಿ ಸಣ್ಣ ಪುಣ್ಣ ತೊಂದರೆಗಳು ಇದ್ದರೆ ಜಿಲ್ಲಾಧಿಕಾರಿಗಳು ಸರಿಪಡಿಸಲು ಅವರು ಮನವಿ ಮಾಡಿದರು.
ಕಲಬುರಗಿ ಮಹಾನಗರ ಪೆÇೀಲಿಸ್ ಆಯುಕ್ತರಾದ ಪಾಟೀಲ್ ಭುವನೇಶ್ವರು ಅವರು ಮಾತನಾಡಿ ಗಣೇಶ ಪ್ರತಿμÁ್ಠಪನೆ ಮಾಡಬೇಕೆಂದು ಗಣೇಶ ವಿಗ್ರಹಗಳ ಪ್ರತಿμÁ್ಠನೆಗೆ ಕಡ್ಡಾಯವಾಗಿ ಮಹಾನಗರ ಪಾಲಿಕೆ ಏಕಗವಾಕ್ಷ್ಷಿಯಲ್ಲಿ ಅನುಮತಿ ಪಡೆದು ಪ್ರತಿμÁ್ಠಪನೆ ಮಾಡಬೇಕು ನಾಳೆಯಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಒಂದೇ ಸೂರಿನಲ್ಲಿ ಅನುಮತಿ ನೀಡಲಾಗುವುದು.
ಈ ಹಿಂದಿನ ಹಳೆಯ ಪದ್ದತಿ, ನಿಯಮ ಅನುಸರಿಸಿ ಶಾಂತಿಯುತವಾಗಿ ಆಚರಿಸಬೇಕು. ಕರೆಯ ಹತ್ತಿರ ಸಣ್ಣ ಭಾವಿ ಇದ್ದು ಅದರೊಳಗಾಗಿ ಒಬ್ಬ ಒಬ್ಬರಾಗಿ ವಿಸರ್ಜನೆ ಮಾಡಬೇಕೆಂದರು.
ಕರ್ನಾಟಕ ರಾಜ್ಯ ಮಾಲಿನ ನಿಯಂತ್ರಣ ಮಂಡಳಿಯ ಅಧಿಕಾರಿ ಮಾತನಾಡಿ ನಾವು ಉಚ್ಚ ನ್ಯಾಯಾಲಯ ತೀರ್ಪಿಗೆ ಬದ್ಧರಾಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಇನ್ನು ಮುಂದೆ ರಾಜ್ಯ ರಾಸಯನಿಕ ಬಣ್ಣಗಳಿಂದ ಗಣೇಶ ವಿಗ್ರಹಗಳನ್ನು ಮಾಡಬಾರದು ಎಂದರು. ಅದೇ ರೀತಿಯಾಗಿ ಈದ- ಮಿಲಾದ್ ಹಬ್ಬದಿನದಂದು ಮೆರವಣಿಗೆ ಕಾರ್ಯಕ್ರಮ ಇರುವುದರಿಂದ ಅದೇ ದಿನ ಗಣೇಶ ವಿಸರ್ಜನೆ ಕಾರ್ಯಕ್ರಮ ಇರುವುದರಿಂದ ಸೂಕ್ತ ಪೆÇೀಲಿಸ್ ಬಂದೋಬಸ್ಥ ವ್ಯವಸ್ಥೆ ಕಲ್ಪಿಸಬೇಕೆಂದು ಸಮಾಜದ ಮುಖಂಡರು ಮನವಿ ಮಾಡಿದರು.
ನಗರ ಪೆÇಲೀಸ್ ಆಯುಕ್ತರಾದ ಚೇತನ್ ಆರ್. ಅವರು ಮಾತನಾಡಿ, ಗಣೇಶ ಪ್ರತಿμÁ್ಠಪನೆ ಮಾಡಲು ಕೆಲವೊಂದು ಸ್ಥಳಗಳಲ್ಲಿ ಪರವಾನಿ ನೀಡುತ್ತವೆ. ವಿದ್ಯುತ್ ತಂತಿಗಳಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಕಳೆದ ಭಾರಿ ಬೆಳಗಾವಿಯಲ್ಲಿ ಶಾರ್ಟ್ ಸ್ಕೂರ್ಟ ಆಗಿ ಸಾವನ್ನಪಿದ್ದರೆ ತಾವುಗಳು ಸಿಸಿಟಿವಿಗಳನ್ನು ಕಡ್ಡಾಯವಾಗಿ ಹಾಕಬೇಕು ಲೈಟಿಂಗ ವ್ಯವಸ್ಥೆ ಕಲ್ಪಿಸಬೇಕೆಂದರು. ಗಣೇಶ ಚತುರ್ಥಿ 11 ದಿನ ವಿಸರ್ಜನೆ ಮಾಡುವಾಗ ಮತೊಂದು ಸಲ ತಮ ಜೊತೆಯಲ್ಲಿ ಸಭೆ ಮಾಡುತ್ತೇವೆಂದರು. ಯಾರು ಅವಸರ ಮಾಡದೇ 11 ದಿನಗಳ ಗಣೇಶ ವಿಸರ್ಜನೆ ಮಾಡಬಾರದೆಂದು ಸಮಾಜದ ಮುಖಂಡರೊಂದಿಗೆ ಮನವಿ ಮಾಡಿದರು.
ಜಿಲ್ಲಾ ಪೆÇೀಲಿಸ್ ವರಿμÁ್ಠಧಿಕಾರಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ಮೊಬೈಲ್‍ನಲ್ಲಿ ಮೇಸಜ್ ಕಳುಹಿಸುವುದಾಗಲಿ ಫೇಸ್‍ಬುಕ್‍ನಲ್ಲಿ ಸುಳ್ಳು ಸುದ್ದಿಗಳು ಕಳುಹಿಸುವುದಾಗಲ್ಲಿ ಕಂಡು ಬಂದರೆ ಅವರಿಗೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಗಣೇಶ ಮಂಡಳಿಯ ಮುಖಂಡರು ಹಾಗೂ ಮುಸ್ಲಿಂ ಸಮುದಾಯದ ಮುಖಂಡು ತಮ್ಮ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ವೇದಿಕೆ ಮೇಲೆ ಡಿ.ಸಿ.ಪಿ. ಯವರಾದ ಕನಿಕಾ ಸಿಕ್ರಿವಾಲ್, ಪೆÇ್ರೀಬೇಷನರಿ ಐ.ಎ.ಎಸ್. ಅಧಿಕಾರಿ ಗಜಾನನ ಬಾಳೆ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಗಣೇಶ ಮಂಡಳಿಯ ಮುಖಂಡರು ಮುಸ್ಲಿಂ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.