
ಬೆಂಗಳೂರು,ಸೆ.೧೨-ನಾಡಿನೆಲ್ಲೆಡೆ ಗಣೇಶ ಹಬ್ಬಕ್ಕೆ ಭರದ ಸಿದ್ಧತೆ ಆರಂಭವಾಗಿದೆ. ಜನರು ಈಗಾಗಲೇ ತಮ್ಮ ತಮ್ಮ ಊರುಗಳಿಗೆ ತೆರಳುವ ಸಿದ್ಧತೆಯಲ್ಲಿದ್ದಾರೆ.
ಗಣೇಶ ಹಬ್ಬಕ್ಕೆ ಹೋಗಲು ಟಿಕೆಟ್ ಕಾಯ್ದಿರಿಸಲು ಜನರು ಪರದಾಡುತ್ತಿದ್ದಾರೆ. ಬಹುತೇಕ ಸಾರಿಗೆ ವ್ಯವಸ್ಥೆಗಳ ಟಿಕೆಟ್‌ಗಳು ಮಾರಾಟವಾಗಿವೆ. ಕೆಲವು ಟಿಕೆಟ್‌ಗಳ ಬೆಲೆ ದುಪ್ಪಟ್ಟಾಗಿದೆ. ಈ ನಡುವೆ ನೈರುತ್ಯ ರೈಲ್ವೆ ಕನ್ನಡಿಗರಿಗೆ ಸಿಹಿಸುದ್ದಿ ನೀಡಿದೆ. ನೈಋತ್ಯ ರೈಲ್ವೆ ಗಣೇಶ ಚತುರ್ಥಿ ಸಂದರ್ಭದಲ್ಲಿ ವಿಶೇಷ ರೈಲು ಆರಂಭಿಸುವುದಾಗಿ ಘೋಷಿಸಿದೆ.
ನೈಋತ್ಯ ರೈಲ್ವೆ ಬೆಂಗಳೂರಿನಿಂದ ಹಲವು ವಿಶೇಷ ರೈಲುಗಳನ್ನು ಆರಂಭಿಸುವುದಾಗಿ ಘೋಷಿಸಿದೆ. ಯಶವಂತಪುರ ಮತ್ತು ಬೆಳಗಾವಿ ನಡುವೆ ವಿಶೇಷ ರೈಲು ಓಡಲಿದೆ. ಈ ವಿಶೇಷ ರೈಲು ಯಶವಂತಪುರದಿಂದ ಸೆಪ್ಟೆಂಬರ್ ೧೫ ರಂದು ಸಂಜೆ ೬:೧೫ ಕ್ಕೆ ಹೊರಡಲಿದೆ. ತುಮಕೂರು-ಅರಸಿಕೆರೆ-ಬೀರೂರು-ದಾವಣಗೆರೆ-ಹರಿಹರ-ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ ೦೭೩೯೦, ಸೆಪ್ಟೆಂಬರ್ ೧೬ ರಂದು ಹಿಂತಿರುಗುತ್ತದೆ, ಬೆಳಗಾವಿಯಿಂದ ಸಂಜೆ ೫:೩೦ ಕ್ಕೆ ಹೊರಟು ಸೆಪ್ಟೆಂಬರ್ ೧೭ ರಂದು ಬೆಳಿಗ್ಗೆ ೪:೩೦ ಕ್ಕೆ ಯಶವಂತಪುರವನ್ನು ತಲುಪುತ್ತದೆ.
ಅದೇ ರೀತಿ ಸೆ.೧೭ರಂದು ಸಂಜೆ ೬:೧೫ಕ್ಕೆ ಯಶವಂತಪುರದಿಂದ ಹೊರಟು ಬೆಳಗಾವಿ ತಲುಪಲಿದೆ. ಸೆಪ್ಟೆಂಬರ್ ೧೮ ರಂದು ಸಂಜೆ ೬:೩೦ ಕ್ಕೆ ಬೆಳಗಾವಿಯಿಂದ ಹೊರಟು ಯಶವಂತಪುರ ತಲುಪಲಿದೆ.
ಈ ವಿಶೇಷ ರೈಲು ಎಸಿ ಟೂ ಟೈರ್ ಕೋಚ್‌ಗಳು, ೭ ಎಸಿ ತ್ರೀ ಟೈರ್ ಕೋಚ್‌ಗಳು, ರೋಗಿಗಳಿಗೆ ೮ ಸ್ಲೀಪರ್ ಕ್ಲಾಸ, ೨ನೇ ಕ್ಲಾಸ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಮತ್ತು ೨ ವಿಕಲಚೇತನ ಸ್ನೇಹಿ ಕೋಚ್‌ಗಳು ಸೇರಿದಂತೆ ಒಟ್ಟು ೧೮ ಕೋಚ್‌ಗಳನ್ನು ಹೊಂದಿರುತ್ತದೆ ಎನ್ನಲಾಗಿದೆ.