ಗಣೇಶ ಗ್ರೂಪ್‍ನಿಂದ ಉಪಹಾರ ವಿತರಣೆ

ವಾಡಿ:ಮೇ.28: ಪಟ್ಟಣ ಸಮೀಪದ ಕಮರವಾಡಿ ಗ್ರಾ.ಪಂ ವ್ಯಾಪ್ತಿಯ ದೇವಾಪುರ ತಾಂಡದ ಶ್ರೀಗಣೇಶ ಗ್ರೂಫ್ ವತಿಯಿಂದ ಪಟ್ಟಣದಲ್ಲಿ ನೆಲೆಸಿರುವ ನಿರ್Uತಿಕರಿಗೆ ಹಾಗೂ ಭೀಕ್ಷುಕರಿಗೆ ಬೆಳಗಿನ ಉಪಹಾರ ನೀಡಿದರು.

ಕೊರೊನಾ ತಡೆಗಟ್ಟಲು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ, ಹಾಗೂ ಹೋಂಗಾರ್ಢಗಳಿಗೆ ಠಾಣೆಗೆ ಭೇಟಿ ನೀಡಿ ಉಪಹಾರ ನೀಡಿದರು.ಮಖ್ಯ ಪೇದೆ ಬಸಲಿಂಗಪ್ಪ ಮುನಗಲ, ರಮೇಶ ಪವಾರ, ಗ್ರೂಫ್‍ನ ಯುವಕರಾದ ವಿ.ಪಿ ನಾಯಕ, ಸುನೀಲ ಜಾಧವ, ಸುನೀಲ ರಾಠೋಡ್, ಅಜಯ ಚವ್ಹಾಣ, ವಿಶಾಲ ಚವ್ಹಾಣ, ಉತ್ತಮ ಜಾಧವ, ಕಾರ್ತಿಕ್ ರಾಠೋಡ್, ಜೀತು ಪವಾರ್ ಇದ್ದರು.