ಗಣೇಶ ಉತ್ಸವ ಹಾಗೂ ಶ್ರಾವಣ ಮಾಸದ ಸಮಾರೋಪ

ಬಸವಕಲ್ಯಾಣ:ಸೆ.11: ತಾಲೂಕಿನ ರಾಜೇಶ್ವರ ಗ್ರಾಮದ ದೇವಾಂಗ ಮಠ ಹನುಮನ ಮಂದಿರ ಭಗತ್ ಸಿಂಗ ನವ ಯುವಕ ಸಂಘ ರಾಜೇಶ್ವರ ರವರು ಆಯೋಜಿಸಿರುವ ಗಣೇಶ ಉತ್ಸವ ಹಾಗೂ ಶ್ರಾವಣ ಮಾಸದ ಸಮಾರೋಪ ಸಮಾರಂಭದ ಪ್ರಸಾದ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಜೇಶ್ವರ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ನಾನು ಸದಾ ಸಿದ್ಧ ಮುಂಬರುವ ದಿನಗಳಲ್ಲಿ ರಾಜೇಶ್ವರ ಗ್ರಾಮ ಪಂಚಾಯತದಿಂದ ಪುರಸಭೆಗೆ ಮೇಲ್ದರ್ಜೆಗೆ ಏರಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸುವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ದೇವಾಂಗ ಮಠದ ಪೂಜ್ಯರಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದರು, ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಭಾಗೀರಥಿ ಬಸವರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಆಫ್ಸರ್ ಮಿಯಾ,ಪ್ರಮುಖರಾದ ಶ್ರೀಧರ ತೆಲಂಗ, ಸಂತೋಷ ಸಿಗಿ, ಕೇಶಪ್ಪ ಬಿರಾದಾರ, ಪ್ರಭೂರಾವ ತಾಳಮಡಗಿರಾಚಯ್ಯ ಸ್ವಾಮೀ, ಮಾಣಿಕ ಘಾಂಘ್ರೆ, ನಾಗಣ್ಣ ಘಾಂಘ್ರೇ, ರಶೀದ್ ಖುರೇಷಿ, ಸತೀಶ ಪೆÇೀಸ್ತಾರ್, ಮೊಹಿನ್ ಮೋಮಿನ್, ಶ್ರೀಮತಿ ಶಾಂತಮ್ಮ ಹೊಸಮನಿ, ರಮೇಶ ಕಂಟಿಕರ, ಸಂಜು ಚಂದನ್ ರವಿ ರಂಜೇರೆ, ದೇವಿಂದ್ರ ಘಾಂಗ್ರೆ ಸೇರಿದಂತೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.