ಗಣೇಶ ಉತ್ಸವ: ಮಕ್ಕಳಿಂದ ನೃತ್ಯ ಸ್ಪರ್ಧೆ

ಕಲಬುರಗಿ,ಸೆ.5-ಸೋಮವಂಶ ಸಹಸ್ತ್ರಾರ್ಜುನ ಕ್ಷತ್ರೀಯ ಸಮಾಜದ ವತಿಯಿಂದ ನಗರದ ಶಹಾಬಜಾರದ ಜಗದಂಭಾ ಮಂದಿರದಲ್ಲಿ ಗಣೇಶ ಉತ್ಸವದ ಅಂಗವಾಗಿ ಮಕ್ಕಳಿಂದ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು.
ಸುಮಾರು 30 ರಿಂದ 40 ಜನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಯುವಕ ಮಂಡಳದ ಅಧ್ಯಕ್ಷರಾದ ಅನೀಲ ಅ.ಮಿಸ್ಕಿನ್, ಉಪಾಧ್ಯಕ್ಷ ದೀಪಕ್ ಎನ್.ಚುಡಾಮಣಿ, ಕಾರ್ಯದರ್ಶಿ ಯೋಗೇಶ ಎಸ್.ಚವ್ಹಾಣ್, ಸಹ ಕಾರ್ಯದರ್ಶಿ ರಾಜು ಎನ್.ಪವಾರ, ಖಜಾಂಚಿ ನಾಗರಾಜ ಆರ್.ಹಬೀಬ್ ಉಪಸ್ಥಿತರಿದ್ದರು. ಸದಸ್ಯರಾದ ಅಂಬಾದಾಸ ಹಬೀಬ್ ಕಾರ್ಯಕ್ರಮ ನಿರೂಪಿಸಿದರು. ಯುವಕರಾದ ಉಮೇಶ ಆರಾಧಿ, ಶುಭಂ ಪವಾರ್, ವಿನಾಯಕ ಚುಡಾಮಣಿ, ಸತೀಷ ಆರಾಧಿ, ಸಮಾಜದ ಹಿರಿಯರಾದ ರಾಜೇಂದ್ರ ಹಬೀಬ್, ಕಿಶೋರ ಆರಾಧಿ, ರವೀಂದ್ರಕುಮಾರ ಮೇಂಗಜಿ, ಮಹಿಳಾ ಮಂಡಳದ ಅಧ್ಯಕ್ಷರಾದ ಲಲಿತಾ ಚವ್ಹಾಣ್, ವಿಜಯಲಕ್ಷ್ಮೀ ಕಮಲಾಪೂರ, ಸುನಂದಾ ಅವರು ಉಪಸ್ಥಿತರಿದ್ದರು.