
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಏ,16- ರಾಜ್ಯದಲ್ಲಿ ಶಾಂತಿ ಸೌಹಾರ್ದತೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಬಳ್ಳಾರಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಬಿ ಮುಂಡ್ರಿಗಿ ನಾಗರಾಜ ಕೋರಿದರು.
ಅವರು ಇಂದು ಕಂಪ್ಲಿ ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಜಾಲಿಬೆಂಚಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಜಿ.ಎನ್.ಗಣೇಶ್ ಪರ ಪ್ರಚಾರ ಮಾಡಿ ಮಾತನಾಡುತ್ತಿದ್ದರು. ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಮುಸ್ಲೀಂ ಮುಖಂಡನನ್ನು ಪೊಲೀಸರ ವಶದಲ್ಲಿರುವಾಗಲೇ ಶೂಟೌಟ್ ಮಾಡಿದೆ. ಅಲ್ಲಿ ಮುಸ್ಲಿಂಮರಿಗೆ ಭದ್ರತೆವಿಲ್ಲದಾಗಿದೆ. ಶಾಂತಿ ಸೌಹಾರ್ದತೆಯ ಕರ್ನಾಟಕದಲ್ಲೂ ಇಂತಹ ಪರಿಸ್ಥಿತಿ ಬರುವುದು ಬೇಡ ಆಲೋಚನೆ ಮಾಡಿಮತನೀಡಿ. ಕಾಂಗ್ರೆಸ್ ಪಕ್ಷ್ ಸರ್ವ ಧರ್ಮ ಜಾತಿಗಳನ್ನು ಸಮನಾಗಿ ಕಾಣುವ ಪಕ್ಷವಾಗಿದೆಂದರು.
ಗಣೇಶ್ ಅವರು ಕಳೆದ ಐದು ವರ್ಷಗಳ ಕಾಲ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿದ್ದಾರೆ. ಯಾರೆ ಕರೆ ಮಾಡಿದರೆ ತಕ್ಷಣ ಸ್ವೀಕರಿಸಿ ಮಾತನಾಡುವ ಗುಣ ಹೊಂದಿದ್ದಾರೆ. ಮಾಜಿ ಶಾಸಕರ ರೀತಿಯಲ್ಲಿ ಹಿಂದೆ ಮುಂದೆ ಗನ್ ಮ್ಯಾನ್ ಇಟ್ಟುಕೊಂಡು ತಿರುಗಲ್ಲ. ಮನೆಗೆ ಹೋದರೆ ಹೊರಗೆ ನಿಲ್ಲಿಸಲ್ಲ. ಸರಳ ವ್ಯಕ್ತಿತ್ವದ ಗಣೇಶ್ ಅವರಿಗೆ ಈ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮತ ನೀಡಿ ಆಯ್ಕೆಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎಲ್ ಮಾರೆಣ್ಣ, ಜಿ ಗೋವರ್ದನ, ಸಣ್ಣ ನಾಗರಾಜ, ಫೋಟೊರಾಜ, ವೆಂಕಟೇಶ್ ಹೆಗಡೆ ಹಾಗೂ ಜಾಲಿಬೆಂಚಿ ಗ್ರಾಮದ ಮುಖಂಡರು ಭಾಗವಹಿಸಿದ್ದರು