ಸಂಜೆವಾಣಿ ವಾರ್ತೆ
ಸಂಡೂರು : ಮಾ: 29: ತಾಲೂಕಿನ ಯಶವಂತನಗರ ಗ್ರಾಮದ ವಿದ್ಯಾರ್ಥಿ ಗಣೇಶ್.ಹೆಚ್. ಇವರು ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಿಂದ ಪಿ.ಹೆಚ್.ಡಿ. ಪದವಿಯನ್ನು ಪಡೆದುಕೊಂಡಿದ್ದಾರೆ.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಧ ಡಾ. ದೇವೇಂದ್ರಪ್ಪ ಹೆಚ್. ಅವರ ಮಾರ್ಗದರ್ಶನದಲ್ಲಿ ಸಿಂಥ್‍ಸಿಸ್ ಅಂಡ್ ಕ್ಯಾರೆಟಕ್ಟರೈಜೇಷನ್ ಕಂಡಕ್ಟಿಂಗ್ ಪಾಲಿಮಾರ್ ಕಂಪೋಸಿಟ್ ಫಾರ್ ಎಲೆಕ್ಟ್ರೋ ಕೆಮಿಕಲ್ ಸೆನ್ಸರ್ ಅಪ್ಲಿಕೇಷನ್ ಎನ್ನುವ ವಿಷಯದಲ್ಲಿ ಪಿ.ಹೆಚ್.ಡಿ. ಪ್ರಭಂಧವನ್ನು ಸಲ್ಲಿಸಿದ್ದಾರೆ.