
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.14: ತಾಲೂಕಿನ ಗುಡುದೂರು ಗ್ರಾಮದಲ್ಲಿ ಇಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಗೆದ್ದ ಕಾರಣ. ಗ್ರಾಮದ ಯುವಕರು, ಶಾಸಕರ ಬೆಂಲಿಗರು ಗಾದಿಲಿಂಗಪ್ಪ ತಾತನ ದೇವಸ್ಥಾನದಲ್ಲಿ 101 ತೆಂಗಿನಕಾಯಿ ಒಡೆದು ತಮ್ಮ ಹರಕೆ ತೀರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಾದ ವೆಂಕರೆಡ್ಡಿ, ಸತೀಶ್ ರೆಡ್ಡಿ, ಕೆ.ಗುರುಪಾದಪ್ಪ, ಕೆ.ವಿರುಪಾಕ್ಷಿ, ಕೆ.ಶ್ರೀಕಾಂತ, ಈ.ವಿನೋದ್, ವಿ.ಶಿವ, ವಿ ಶ್ರೀನಿವಾಸ್, ಎಂ.ದಶರಥ ಮೊದಲಾದವರು ಇದ್ದರು.