ಗಣೇಶ್ವರ ಅವಧೂತರ ಭಾವಚಿತ್ರದ ಭವ್ಯ ಮೆರವಣಿಗೆ

ಬೀದರ್:ಮಾ.1: ಗಣೇಶ್ವರ ಅವಧೂತರ 10ನೇ ಪುಣ್ಯ ಆರಾಧನೆ ಮಹಾ ಮಹೋತ್ಸವ ಭಾಲ್ಕಿ ತಾಲ್ಲೂಕಿನ ರುದನೂರ ಗ್ರಾಮದಲ್ಲಿ ಶ್ರದ್ಧೆ, ಭಕ್ತಿಯೊಂದಿಗೆ ತೆರೆ ಕಂಡಿತು.

ಮಹೋತ್ಸವ ಅಂಗವಾಗಿ ಗ್ರಾಮದ ಕಮರಿಮಠದಲ್ಲಿ ದೇವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಮಠದಲ್ಲಿ ಪಂಚಧಾತುವಿನ ಗಣೇಶ್ವರ ಅವಧೂತರ ಮೂರ್ತಿ ಪ್ರತಿಷ್ಠಾಪಿಸಿ, ರುದ್ರಾಭಿಷೇಕ, ಮಹಾ ಮಂತ್ರ ಜಪ, ನಾಣ್ಯ, ವಿಭೂತಿ ಹಾಗೂ ಹೂವಿನಿಂದ ತುಲಾಭಾರ ಮಾಡಲಾಯಿತು.

ಬೀದರ್‍ನ ಗುರುದೇವಾಶ್ರಮದ ಗಣೇಶಾನಂದ ಮಹಾರಾಜ, ಬೆಳ್ಳೂರಿನ ಮಾತೆ ಅಮೃತಾನಂದಮಯಿ, ಮುಚಳಂಬದ ಪ್ರಣವಾನಂದ ಸ್ವಾಮೀಜಿ, ಮಾತೆ ಸಿದ್ಧೇಶ್ವರಿ, ಮಳಚಾಪುರದ ಸದ್ರೂಪಾನಂದ ಸ್ವಾಮೀಜಿ, ಚಳಕಾಪುರದ ಶಂಕರಾನಂದ ಸ್ವಾಮೀಜಿ ಅವರು ಪ್ರವಚನ ನೀಡಿದರು.

ದೇವ ಆಳಂದದ ಮಂಗಲಾ ತಾಯಿ ಅವರು ಜ್ಞಾನೇಶ್ವರಿ ಪಾರಾಯಣ ಮಾಡಿದರು. ಕಲವಾಡಿ ಗ್ರಾಮಸ್ಥರು ಕೀರ್ತನೆ ನಡೆಸಿಕೊಟ್ಟರು.

ಕೊನೆಯ ದಿನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ರಥದಲ್ಲಿ ಗಣೇಶ್ವರ ಅವಧೂತರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.

ರುದನೂರ, ರುದನೂರ ತಾಂಡಾ, ಕಲವಾಡಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಣೆ ಮಾಡಿದರು.

ಗ್ರಾಮದ ಪ್ರಮುಖರಾದ ಶಿವರಾಜ ಪಾಟೀಲ, ಸೋಮನಾಥ ಪಟ್ನೆ, ರಾಜಕುಮಾರ ಸ್ವಾಮಿ, ಶಿವಕುಮಾರ, ವಿಶ್ವನಾಥ, ಸದಾನಂದ, ಮಹೇಶ, ಕಲ್ಲಪ್ಪ, ಪವನ್, ಆನಂದ, ಪ್ರಕಾಶ ಕೋಟೆ, ಬಾಬುರಾವ್, ಶಿವಾನಂದ, ಮಂಗಲಾಬಾಯಿ, ಅನೂಷಾಬಾಯಿ, ಭಾರತಬಾಯಿ, ರಾಜಮ್ಮ, ಕೆವಳಾಬಾಯಿ, ಲಕ್ಷ್ಮಿ, ಶಾರಮ್ಮ, ಗಂಗಮ್ಮ ಮತ್ತಿತರರು ಭಾಗವಹಿಸಿದ್ದರು.