
ಬೀದರ:ಸೆ.15: ಚೌಳಿ ಶ್ರೀ ಶ್ರೀ ಗಣೇಶ್ವರ ಅವಧೂತರ ಚೌಳಿ ತಪೆÇೀಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳಿಂದ ತಪೆÇೀ ಮಂದಿರದಲ್ಲಿ ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಸೆ.19 ರಂದು ಶ್ರಾವಣ ಮಾಸದ ಒಂದು ತಿಂಗಳು ಸಮಾಪ್ತಿಗೊಳ್ಳಲಿದೆ. ಅದೇ ದಿನದಂದು ಬರುವಂತಹ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ.
ತಪೆÇೀಮಂದಿರದಲ್ಲಿ 1001 ಲಿಂಗಗಳು ಇದ್ದು, ತಾವು ತಪೆÇೀಮಂದಿರಕ್ಕೆ ಬಂದು ಲಿಂಗ ಪೂಜೆ ಮಾಡಿಕೊಳ್ಳಬಹುದು, ಅದೇ ದಿನದಂದು ಬೆಳಿಗ್ಗೆ 11 ಗಂಟೆಗೆ ಅಪ್ಪನವರ ಪಾಲ್ಕಿ ಮೆರವಣಿಗೆ ಕೂಡ ಆಯೋಜಿಸಲಾಗಿದೆ.
ಆದಕಾರಣ ಸಮಸ್ತ ಸದ್ಭಕ್ತರು ಶ್ರಾವಣ ಮಾಸ ಸಮಾಪ್ತಿ ದಿನದಂದು ಆಗಮಿಸಿ, ಪ್ರಸಾದ ಸೇವನೆ ಮಾಡಿ, ಪುನೀತರಾಗಬೇಕೆಂದು ಚೌಳಿ ಅಪ್ಪಾಜಿಯವರ ಶಿಷ್ಯರಾದ ಪ್ರಕಾಶ ಮಹಾರಾಜರು ತಿಳಿಸಿದ್ದಾರೆ.