ಗಣೇಶೋತ್ಸವ ಸಂಭ್ರಮ

(ಸಂಜೆವಾಣಿ ವಾರ್ತೆ)
ಬಾದಾಮಿ,ಸೆ21: ಇಲ್ಲಿನ ಆನಂದ ನಗರದ ಗಜಾನನ ಅಭಿವೃದ್ಧಿ ಸೇವಾ ಸಮಿತಿ, ಗೌರಿ ಗಣೇಶ ಮಹಿಳಾ ಮಂಡಳ ಹಾಗೂ ವಿನಾಯಕ ಮಿತ್ರ ಮಂಡಳಿ ಸಹಯೋಗದಲ್ಲಿ ಗಜಾನನ ದೇವಸ್ಥಾನದ 21 ನೇ ವಾರ್ಷಿಕೋತ್ಸವ ಹಾಗೂ ಸ್ವರ್ಣ ಗೌರಿ ಹಾಗೂ ಗಣೇಶ ಹಬ್ಬವು ಸಂಭ್ರಮದಿಂದ ಜರುಗಿತು.
ದೇವಸ್ಥಾನದಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಗೌರಿ ಮೂರ್ತಿ ಪ್ರತಿಷ್ಟಾಪನೆ ಹಾಗೂ ಗೌರಿ ವೃತಾಚರಣೆ ನೆರವೇರಿಸಿದರು.
ಪುರಸಭೆ ಸದಸ್ಯ ನಾಗರಾಜ ಕಾಚಟ್ಟಿ ಮಾತನಾಡಿ, ನಮ್ಮ ಹಿರಿಯರು ನಮಗೆ ಧಾರ್ಮಿಕ ಪರಂಪರೆಯ ಮಾರ್ಗವನ್ನು ತೋರಿಸಿದ್ದಾರೆ. ಇದಕ್ಕೆ ಪೂರಕವಾಗಿ ವಿವಿಧ ಸಮಿತಿಗಳನ್ನು ರಚಿಸಿಕೊಂಡು ವರ್ಷವಿಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಕೂಡಾ ಮಾಡುತ್ತ ಬರಲಾಗುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿ.ಜಿ.ರೇವಡಿ, ಶ್ರೀಮತಿ ಬಸಮ್ಮ ಕಾರುಡಗಿಮಠ, ರತ್ನಕ್ಕ ಪಟ್ಟಣದ, ಸಿ.ವ್ಹಿ. ಚೆನ್ನವೀರಗೌಡರ, ಮಲ್ಲಿಕಾರ್ಜುನ ಹಡಪದ, ಪುರಸಭೆ ಸದಸ್ಯ ರೆಹಮಾನ ಕೆರಕಲಮಟ್ಟಿ ಇತರರು ಇದ್ದರು. ಸಂತೋಷ ಪಟ್ಟಣಶೆಟ್ಟಿ ನಿರೂಪಿಸಿ ವಂದಿಸಿದರು.