ಗಣೇಶೋತ್ಸವ ಏಕತೆಯ ಪ್ರತೀಕ: ಮಾ.ವೆಂಕಟರಾಮ್

ಸಂಜೆವಾಣಿ ನ್ಯೂಸ್
ಮೈಸೂರು: ಸೆ.19:- ಮಂಡಿ ಮೊಹಲ್ಲಾದಲ್ಲಿ ರುಕ್ಮಿಣಿ ಗುಣಬಾಯ್ ಸಮುದಾಯ ಭವನದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಮಂಡಿ ಮೊಹಲ್ಲಾ ಹಿತರಕ್ಷಣ ವೇದಿಕೆ ವತಿಯಿಂದ ಗೌರಿ ಗಣೇಶ ಹಬ್ಬ ಹಾಗೂ ಪ್ರಧಾನಿ ನರೇಂದ್ರ ಮೋದಿ 73ನೇ ಜನುಮದಿನ ಹಿನ್ನೆಲೆಯಲ್ಲಿ ಮೊಹಲ್ಲಾ ದ 400 ಮಹಿಳೆಯರಿಗೆ ಸೀರೆ, ಕುಂಕುಮ, ಅರಿಶಿಣ, ಬಳೆ ವಿತರಿಸುವ ಮೂಲಕ ಬಾಗಿನ ವಿತರಿಸಿ ಮಾತನಾಡಿದ ಆರ್ ಎಸ್ ಎಸ್ ನ ಪ್ರಾಂತ ಕಾರ್ಯಕಾರಿ ಸದಸ್ಯರದ ಮಾ ವೆಂಕಟರಾಮ್ ತಿಳಿಸಿದರು.
ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬವಾಗಿದೆ. ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬ, ತಿಲಕರ ಕರೆಗೆ ಜಾತಿ-ಮತ ಬೇಧವಿಲ್ಲದೆ ಬಹುಬೇಗನೆ ಸ್ಪಂದಿಸಿದರು ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿ ಮುಟ್ಟಿಸಿತು ಎ0ದರು.
ಜಾತಿ ಜಾತಿಗಳ ನಡುವೆ ಅಂತರ ತುಂಬಲು, ಅವರ ನಡುವೆ ಕೆಳಹಂತದಲ್ಲಿ ಐಕ್ಯತೆ ಮೂಡಿಸುವುದೇ ಗಣೇಶೋತ್ಸವ, ಇದೊಂದು ರಾಷ್ಟ್ರೀಯ ಹಬ್ಬವಾಗಿದೆ. ಗಣೇಶ ಪ್ರತಿಯೊಬ್ಬರ ಪಾಲಿಗೂ ದೇವಸ್ವರೂಪಿಯಾಗಿದ್ದು, ದೆಷ್ಯಾದ್ಯಂತ ಜನತೆ ವಿಜೃಂಭಣೆಯಿಂದ ಶಾಂತಿಯುತವಾಗಿ ಆಚರಿಸಬೇಕು ಎಂದರು.
ಇದೆ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಲ್ ನಾಗೇಂದ್ರ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮೃಗಾಲಯ ಮಾಜಿ ಸದಸ್ಯರಾದ ಜ್ಯೋತಿರೇಚಣ್ಣ, ಬಿಜೆಪಿ ಮಹಿಳಾ ಮೋರ್ಚಾ , ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್, 24ನೇ ವಾರ್ಡಿನ ಅಧ್ಯಕ್ಷರಾದ ಕೇಬಲ್ ವಿಜಿ, ಹೇಮಾ ಸಂತೋಷ್, ಉಮೇಶ್, ನಾಗಮಣಿ, ರಶ್ಮಿ, ಸೂರಜ್, ಸದಾಶಿವ್, ಚಂದ್ರು, ಮಹದೇವ, ಸುರೇಶ್ ರಾವ್, ಕೇಶವ್, ವಿಜಯ್ ಕುಮಾರ್ , ಹಾಗೂ ಇನ್ನಿತರರು ಭಾಗಿಯಾಗಿದ್ದರು