ಗಣೇಶೋತ್ಸವ ಆಚರಣೆ- ಶಾಂತಿ ಸುವ್ಯವಸ್ಥೆ ನಿಯಮಗಳ ಪಾಲನೆ ಅಗತ್ಯ

ಕೋಲಾರ,ಆ. ೩೦- ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಂಘ ಸಂಸ್ಥೆಗಳು ಸ್ಥಾಪಿಸುವಂತ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ರೂಪಿಸಿರುವ ಎಲ್ಲಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ ಸಹಕರಿಸ ಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಕರೆ ನೀಡಿದರು.
ವಿಶೇಷಗಾಗಿ ವಿವಿಧ ತಾಲ್ಲೂಕುಗಳ ನಗರ ಮತ್ತು ಪಟ್ಟಣಗಳಲ್ಲಿ ಸಂಘ ಸಂಸ್ಥೆಗಳು ಅದ್ದೂರಿಯಾಗಿ ಆಚರಿಸುವಂತ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೆಂಕಟರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳ ಮತ್ತು ಶಾಂತಿ ಸೌಹಾರ್ಧ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗಳನ್ನು ಕಾಪಾಡುವದಿಸೆಯಲ್ಲಿ ಜಿಲ್ಲಾಡಳಿತವು ರೂಪಿಸಿರುವ ನಿಯಮಗಳನ್ನು ಉಲ್ಲಂಘಸುವಂತ ಸಾರ್ವಜನಿಕ ಗಣೇಶ ಸಮಿತಿ, ಸಂಘ-ಸಂಸ್ಥೆಗಳು ಪ್ರಮುಖವಾಗಿ ಗಣೇಶ ಮೂರ್ತಿಯನ್ನು ಸ್ಥಾಪಿಸುವ ಮುನ್ನ ಸಂಬಂಧ ಪಟ್ಟ ಸ್ಥಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸ ಬೇಕು. ಸ್ಥಳವು ಖಾಸಗಿಯವರದ್ದಾಗಿದ್ದರೆ ಮಾಲೀಕರ ಅಥಾವ ಸರ್ಕಾರದ್ದಾಗಿದ್ದಾರೆ ಸಂಬಂಧ ಪಟ್ಟ ಅಧಿಕಾರಿಗಳ ನಿರಾಕ್ಷಪ್ಪಣೆ ಪತ್ರ ಪಡೆಯ ಬೇಕು. ಸಂಬಂಧ ಪಟ್ಟ ಪೋಲಿಸ್ ಠಾಣೆಯ ಅನುಮತಿ ಪತ್ರ ಪಡೆಯ ಬೇಕು. ವಿದ್ಯುತ್ ಸಂರ್ಪಕ ಪಡೆಯಲು ಬೆಸ್ಕಾಂ ನಿಂದ ಅನುಮತಿ ಪತ್ರ ಹಾಗೂ ನಗರಸಭೆ ಅಥಾವ ಪುರಸಭೆ ನಿಯಮಗಳನ್ನು ಪಾಲಿಸ ಬೇಕು ಎಂದರು.
ಗಣೇಶ ಮೆರವಣಿಗೆ ಮುನ್ನು ಮಾರ್ಗವನ್ನು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡ ಬೇಕು. ಡಿ.ಜೆ.ಗಳು ಬಳಿಸುವಂತೆ ಇದ್ದರೆ ಶಬ್ದ ಮಾಲಿನ್ಯವಾಗದಂತೆ ನಿಯಮಗಳನ್ನು ಅನುಸರಿಸ ಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ , ಪರಿಸರಕ್ಕೆ ಧಕ್ಕೆಯಾಗದಂತೆ ಹಬ್ಬವನ್ನು ಆಚರಿಸ ಬೇಕು ಎಂದು ಕಿವಿ ಮಾತು ತಿಳಿಸಿದರು.
ಯಾವೂದೇ ಸಂಘ ಸಂಸ್ಥೆಗಳು ಇಲಾಖೆಗಳು ನೀಡಿರುವ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಸುವ್ಯವಸ್ಥೆಗಳಿಗೆ ಭಂಗ ತಂದಲ್ಲಿ ಅಥಾವ ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡಿದಲ್ಲಿ ಅಂಥಹ ಸಂಘ ಸಂಸ್ಥೆ- ಸಮಿತಿಗಳ ವಿರುದ್ದ ಕ್ರಮ ಜರುಗಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾ ರಕ್ಷಣಾಧಿಕಾರಿ ಸಚೀನ್ ಘೋರ್ಪಡೆ, ಪೊಲೀಸ್ ಅಧಿಕಾರಿಗಳು, ಬೆಸ್ಮಾಂ ಅಧಿಕಾರಿಗಳು, ಶಾಂತಿ ಮತ್ತು ಸೌಹಾರ್ದ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು.