ಗಣೇಶೋತ್ಸವ ಅಚ್ಚುಕಟ್ಟಾಗಿ ಆಚರಿಸಿ

*ಅಹಿತರಕರ ಘಟನೆಗಳು ನಡೆಯುವುದಕ್ಕೆ ಅವಕಾಶ ನೀಡದಿರಿ.
*ಅರಕೇರಾದಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆಯಲ್ಲಿ ಪಿಐ ಕೆ.ಹೊಸಕೇರಪ್ಪ ಸಲಹೆ.
ಅರಕೇರಾ,ಸೆ.೧೫- ಗಣೇಶೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಪಿಐ ಕೆ.ಹೊಸಕೇರಪ್ಪ ಹೇಳಿದರು.
ಪಟ್ಟಣದಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಹಿನ್ನಲೆ ಪ್ರಮುಖರಿಗಾಗಿ ಏರ್ಪಡಿಸಿದ್ದ ಪೂರ್ವಭಾವಿ ಶಾಂತಿ ಸಭೆ ಉದ್ದೇಶಿಸಿ ಬುಧವಾರ ಮಾತನಾಡಿದರು.
ಗಣಪತಿ ಹಬ್ಬ ಮಾಡುವವರು ಹೆಚ್ಚು ಯುವಕರು. ಆದ್ದರಿಂದ ಗಲಾಟೆ ಗಲಭೆಗಳಲ್ಲಿ ಭಾಗಿಯಾಗಬಾರದು. ಕೋಮು ಗಲಭೆಗಳಿಗೆ ಅವಕಾಶ ಮಾಡಿದರೆ ಪ್ರಕರಣ ದಾಖಲಾಗುತ್ತದೆ. ಇದರಿಂದ ಯುವಕರಿಗೆ ಭವಿಷ್ಯದಲ್ಲಿ ಬೆಳವಣಿಗೆಗೆ ಅಡೆತಡೆಗಳು ಉಂಟಾಗುತ್ತವೆ. ಪೊಲೀಸ್ ಸ್ಟೇಷನ್, ಗ್ರಾಮ ಪಂಚಾಯಿತಿ, ಕೆಇಬಿ ಗಳಲ್ಲಿ ಅನುಮತಿ ಪಡೆಯಬೇಕು. ಪ್ರತಿ?ಪನೆ ಹಾಗೂ ವಿಸರ್ಜನೆ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ಡಿಜೆ ಬಳಕೆಗೆ ಅವಕಾಶವಿಲ್ಲ ಎಂದರು.
ಸಾರ್ವಜನಿಕರಿಗೆ ತೊಂದರೆ ಆಗುವಂತೆ ಹಬ್ಬಗಳನ್ನು ಆಚರಿಸಬಾರದು. ೨೦ ಜನರಿರುವ ಸ್ವಯಂ ಸೇವಕರ ಸಂಘ ಉತ್ಸವದ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಇಸ್ಪೀಟ್ ಆಟ, ಮಧ್ಯಪಾನ ಸೇರಿ ಇತರ ಅನಾಹುತಗಳಿಗೆ ಅವಕಾಶ ಮಾಡಿಕೊಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಅನ್ಯ ಧರ್ಮಗಳ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಹರಿ ಬಿಡಬಾರದು. ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳು ಅನ್ಯುನ್ಯವಾಗಿ ಆಚರಿಸಬೇಕು ಎಂದರು.
ಈ ವೇಳೆ ಪೊಲೀಸ್ ಕಾನ್ಸ್ಟೇಬಲ್‌ಗಳಾದ ದೇವರಾಜ ನಾಯಕ, ಹನುಮೇಶ ಸೇರಿದಂತೆ ಸಾರ್ವಜನಿಕರು ಇದ್ದರು.