ಗಣೇಶೋತ್ಸವ ಅಂಗವಾಗಿ ೩ ದಿನ ಸಂಗೀತ ಕಾರ್ಯಕ್ರಮ – ವೆಂಕಟೇಶ ನವಲಿ

ರಾಯಚೂರು,ಸೆ.೧- ಕಳೆದ ೩೦ ವರ್ಷಗಳಿಂದ ಜೋಡಾಂಜನೇಯ ದೇವಸ್ಥಾನದಲ್ಲಿ ವಿಶೇಷ ಗಣೇಶೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕೂಡ ಗಣೇಶೋತ್ಸವ ಅಂಗವಾಗಿ
೩ ದಿನಗಳ ಕಾಲ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೆಂಕಟೇಶ ನವಲಿ ಅವರು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ಜೋಡಾಂಜನೇಯ ದೇವಸ್ಥಾನ ಕಳೆದ ೩೦ ವರ್ಷಗಳಿಂದ ಗಣೇಶೋತ್ಸವ ಆಚರಣೆ ಮಾಡುತ್ತಿರುವ ಹಿನ್ನೆಲೆ ಈ ಬಾರಿ ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಹಲವು ದೊಡ್ಡ ವಿದ್ವಾಂಸರುಗಳನ್ನು ಕರೆಸುವ ಮೂಲಕ ದಾಸವಾಣಿ ಕಾರ್ಯಕ್ರಮ, ವಿವಿಧ ಕಾರ್ಯಕ್ರಮಗಳನ್ನು ಕೂಡ ಆಯೋಜನೆ ಮಾಡಲಾಗಿದೆ.ಅಲ್ಲದೆ ರಂಗೋಲಿ ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಮಕ್ಕಳಿಗಾಗಿ ಆಯೋಜನೆ ಮಾಡಲಾಗಿದೆ.
ಜೋಡಾಂಜನೇಯ ದೇವಸ್ಥಾನದಿಂದ ಅನೇಕ ಆರೋಗ್ಯ ತಪಾಸಣೆ ಕಾರ್ಯಕ್ರಮ ರಕ್ತದಾನ ಕಾರ್ಯಕ್ರಮ ಸೇರಿದಂತೆ ಸಾಕಷ್ಟು
ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಾಸುದೇಂದ್ರ ಸಿರವಾರ, ವೇಣುಗೋಪಾಲ್, ಪ್ರಸನ್ನ ಮಾಧವ ಗುಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.