ಗಣೇಶೋತ್ಸವಕ್ಕೆ ಡಿಜೆ ನಿಷಿದ್ದ:ಡಿವೈಎಸ್ ಪಿ ತಾಮ್ರಾಧ್ವಜ್

ಜಗಳೂರು. ಸೆ.೮; ಸರ್ಕಾರದ ಷರತ್ತುಬದ್ದ ನಿಯಮಗಳೊಂದಿಗೆ ಗಣೇಶ ಹಬ್ಬ ಆಚರಿಸಲು  ಡಿ.ವೈ.ಎಸ್.ಪಿ  ನರಸಿಂಹ.ವಿ ತಾಮ್ರಾಧ್ವಜ್ ಸೂಚಿಸಿದರು.ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ್ ಹಬ್ಬದ ಪೂರ್ವಭಾವಿಯಾಗಿ ಕರೆದಿದ್ದ  ಶಾಂತಿ ಸಭೆ ಅಧ್ಯಕ್ಷತೆ ವಹಿಸಿ  ಮಾತನಾಡಿದರು.ಕೋವಿಡ್ ಮೂರನೇ ಅಲೆಯ ಮುಂಜಾಗ್ರತೆಯಿಂದ ಸರ್ಕಾರದ ಮಾರ್ಗಸೂಚಿಯಂತೆ ಗ್ರಾಮೀಣಭಾಗ ಸೇರಿದಂತೆ ವಾರ್ಡ್ ಗೆ ಒಂದರಂತೆ  ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು.ಪಿಓಪಿ ಗಣೇಶ ಮೂರ್ತಿ ಬಳಸದೆ ಪಾರಂಪರಿಕವಾಗಿರುವ ಪರಿಸರ ಸ್ನೇಹಿ  ಮಣ್ಣಿನ ಗಣಪತಿಗಳನ್ನು ಬಳಸಬೇಕು.ಅದು 4 ಅಡಿ ಎತ್ತರ ಹೊಂದಿರಬೇಕು.ವಿಸರ್ಜನೆಗೆ 5 ದಿನಗಳು ಮಾತ್ರ ಕಾಲಾವಕಾಶವಿದ್ದು.ಮೂರ್ತಿ ದರ್ಶನ ಪೂಜೆ ಸಂದರ್ಭದಲ್ಲಿ 20‌ ಕ್ಕೂ ಅಧಿಕ ಜನಸೇರುವಂತಿಲ್ಲ,ಅಲ್ಲದೆ ಪಟ್ಟಣಪಂಚಾಯಿತಿ ಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.ಡಿಜೆ ಸೌಂಡ್ ಬಾಕ್ಸ್ ಅಳವಡಿಸಿ ಮೆರವಣಿಗೆ ಮಾಡಬಾರದು.ವಿಸರ್ಜನೆ ಯನ್ನು ಕೃತಕ ಹೊಂಡದಲ್ಲಿ ಹಾಕಬೇಕು.ನಾಲ್ಕು ಜನಕ್ಕಿಂತ ಹೆಚ್ಚುಜನ ವಿಸರ್ಜನೆಗೆ ತೆರಳಬಾರದುಕಡ್ಡಾಯವಾಗಿ ಸಾನಿಟೈಸೇಷನ್ ಗೊಳಿಸಿ ಆರು ಅಡಿ ಅಂತರ ಕಾಪಾಡಿಕೊಂಡು,ಸಾರ್ವಜನಿಕ ವಾಗಿ ಕೋವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಬೇಕು.ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು.ಆದ್ದರಿಂದ ನೆಮ್ಮದಿಯಿಂದ ಸಾಂಸ್ಕೃತಿಕವಾಗಿ ಹಬ್ಬವನ್ನು ಸರಳವಾಗಿ ಆಚರಿಸೋಣ ಎಂದು ಕರೆ ನೀಡಿದರು.ಸಿಪಿಐ ಮಂಜುನಾಥ್ ಪಂಡಿತ್ ಮಾತನಾಡಿ,ಸರ್ಕಾರ ಗೌರಿಗಣೇಶ್ ಹಬ್ಬಕ್ಕೆ ತಕ್ಕಂತೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು.ಕೊವಿಡ್ ನಿಂದ ಸಾವು ನೋವುಗಳಿಂದ ಬಸವಳಿದು ಹೋಗಿದ್ದು ಇದರ ಮದ್ಯೆಯೂ ಸನಾತನ ಸಂಸ್ಕೃತಿ ಗಳನ್ನು ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಿಎಸ್ ಐ ಸಂತೋಷ್ ಭಾಗೋಜಿ,ಮುಖಂಡರಾದ ಬಿ. ಲೊಕೇಶ್ ರೇವಣ್ಣ,ವಕೀಲ ಹನುಮಂತಪ್ಪ,ಸತೀಶ್ ಮಾದಿಹಳ್ಳಿ ಮಂಜಪ್ಪ,ಸಿಬ್ಬಂದಿಗಳಾದ ನಾಗಭೂಷಣ್,ಮಾರುತಿ,ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.