ಗಣೇಕಲ್ ಜಲಾಶಯ ೧೫ ಅಡಿ ನೀರು ಭರ್ತಿಗೆ ಕ್ರಮ- ಸಚಿವ

ರಾಯಚೂರು, ನ.೦೧-ಮುಂದಿನ ೩ ದಿನಗಳ ಸತತ ಪ್ರಯತ್ನದ ಮೂಲಕ ಗಣೇಕಲ್ ಜಲಾಶಯದಲ್ಲಿ ೧೫ ಅಡಿ ನೀರು ನಿರ್ವಹಣೆ ಮಾಡುವುದರ ಮೂಲಕ ಕೆಳಭಾಗದ ರೈತರಿಗೆ ಕುಡಿಯಲು ಮತ್ತು ಜಮೀನು ಬಳಕೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ವೈದ್ಯಕೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ್ ಅವರು ಹೇಳಿದರು. ಅವರಿಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ದ್ವಜಾರೋಹಣ ನೆರೆವೇರಿಸಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,
ಗಣೇಕಲ್ ಜಲಾಶಯ ಕೇಳಭಾಗದ ರೈತರಿಗೆ ನೀರಿನ ಕೊರತೆ ಆಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು. ಗಣೇಕಲ್ ಜಲಾಶಯ ಮತ್ತು ತುಂಗಭದ್ರಾ ಎಡದಂಡೆ ಕಾಲುವೆಗೆ ೧೧ ಅಡಿ ನೀರು ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು. ಈಗ ೧೫ ಅಡಿ ನೀರು ನಿರ್ವಹಣೆ ಕ್ರಮ ವ್ಯಯಿಸಲಾಗುವುದು ಎಂದರು.
ನಮ್ಮ ಕಾಂಗ್ರೆಸ್ ಸರಕಾರ ಆಡಳಿತ ಅವಧಿಯಲ್ಲಿ ಕೆಳಭಾಗದ ರೈತರಿಗೆ ನೀರಿನ ಸಮಸ್ಯೆ ಆಗದಂತೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ನಮ್ಮ ಸರಕಾರ ಬದ್ದವಾಗಿದೆ ಎಂದರು. ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಹಿಂದಿನ ಬಿಜೆಪಿ ಸರಕಾರ ಆಡಳಿತ ಅವಧಿಯಲ್ಲಿ ಸಿಬಿಐ ತನಿಖೆ ವ್ಯಯಿಸಬೇಕಿತ್ತು. ವಿರೋಧ ಪಕ್ಷದ ನಾಯಕರು ತಮ್ಮ ರಾಜಕೀಯ ಬೇಲೆ ಬಯಿಸಿಕೊಳ್ಳಲು ಇಲ್ಲದ ಸಲ್ಲದ ಆರೋಪ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಉಪಯೋಗ ಆಗುವುದಿಲ್ಲ ಎಂದು ಕಿಡಿಕಾಡಿದರು.