ಗಣೇಕಲ್‌ನಲ್ಲಿ ಏಕಲವ್ಯ ಖೋಖೋ ಕ್ಲಬ್ ಸ್ಥಾಪನೆ

ದೇವದುರ್ಗ,ಮಾ.೦೬- ಗ್ರಾಮೀಣ ಭಾಗದ ಕ್ರೀಡೆಗಳು ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ತಾಲೂಕಿನ ಬಿ.ಗಣೇಕಲ್ ಗ್ರಾಮದ ಯುವಕರು ಹಾಗೂ ಸಮಾನಮನಸ್ಕರು ಏಕಲವ್ಯ ಖೋಖೋ ಕ್ಲಬ್ ಸ್ಥಾಪನೆ ಮಾಡುವ ಮೂಲಕ ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಿದ್ದಾರೆ.
ಖೋಖೋ ತರಬೇತುದಾರ ಆಂಜಿನೇಯ ಕುರ್ಲೆ ಮಾತನಾಡಿ, ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಏಕಲವ್ಯ ಖೋಖೋ ಕ್ಲಬ್ ಸ್ಥಾಪನೆ ಮಾಡಲಾಗಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಅನೇಕ ಪ್ರತಿಭೆಗಳಿದ್ದು, ಅವರಿಗೆ ಪ್ರೋತ್ಸಾಹದ ಕೊರತೆಯಿದೆ. ಈ ವಿದ್ಯಾರ್ಥಿಗಳು ಜಿಲ್ಲೆ ಮಾತ್ರವಲ್ಲ ರಾಜ್ಯ ಮಟ್ಟದಲ್ಲೂ ಮಿಂಚುವ ಮೂಲಕ ತಾಲೂಕಿನ ಕೀರ್ತಿ ಮುಗಿಲೆತ್ತರಕ್ಕೆ ಬೆಳೆಸಿದ್ದಾರೆ.
ಇಂಥ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಕೊರತೆಯಿದೆ.
ಈ ಹಿನ್ನೆಲೆಯಲ್ಲಿ ಏಕಲವ್ಯ ಕ್ಲಬ್ ಸ್ಥಾಪನೆ ಮಾಡಿ ಕ್ರೀಡಾಪಟುಗಳಿಗೆ ಉಚಿತವಾಗಿ ನಿರಂತರವಾಗಿ ತರಬೇತಿ ನೀಡಲಾಗುವುದು. ಅಲ್ಲದೆ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ಸೇರಿ ಅಗತ್ಯ ಪರಿಕರ ಉಚಿತವಾಗಿ ನೀಡಲಾಗುತ್ತಿದೆ. ಕ್ಲಬ್ ಸ್ಥಾಪನೆಗೆ ನಮ್ಮೂರಿನ ಯುವಕರು ಹಾಗೂ ಸಮಾನ ಮನಸ್ಕರು ಕೈಜೋಡಿಸಿದ್ದಾರೆ. ವಿದ್ಯಾರ್ಥಿಗಳು ಕ್ಲಬ್ ಸದ್ಬಳಕೆ ಮಾಡಿಕೊಂಡು ತಮ್ಮ ಪ್ರತಿಭೆ ಪ್ರದರ್ಶನ ಮಾಡುವ ಮೂಲಕ ತಾಲೂಕಿನ ಕೀರ್ತಿ ಮತ್ತಷ್ಟು ಹೆಚ್ಚಿಸಬೇಕು ಎಂದರು.
ಹಿರಿಯ ತರಬೇತುದಾರ ಕೆ.ಮಲ್ಲಯ್ಯ, ಶಿವಕುಮಾರ ಮಂಡ್ಲಿ, ಆಂಜಿನೇಯ ಮಾನ್ವಿ, ಚನ್ನಬಸವ ಭೋವಿ, ಅಂಜು ಅನ್ವರ್, ಮಲ್ಲು ಡಿ, ದೇವರಾಜ ಅಬಕಾರಿ, ಬಸವರಾಜ್ ಯಾದವ್, ಅಯ್ಯಣ್ಣ ಕಟ್ಟಿಮನಿ, ರವಿ ಮಾನ್ವಿ, ಪಿ.ಸ್ವಾಮಿ, ಕೆ.ಅಂಜು ಜಿನ್ನು, ಅಮರೇಶ ಭೋವಿ, ರೆಡ್ಡೆಪ್ಪ ಚಂದ್ರು ಬಾಬೆ, ಹೊನ್ನಯ್ಯ, ಶಿಕ್ಷಕ ಸದ್ದಾಂಹುಸೇನ್, ಹಿರಿಯ ವರದಿಗಾರರಾದ ಆನಂದ ಗುಡಿ, ಬಂದೇನವಾಜ್ ನಾಡದಿನ್ನಿ ಇತರರಿದ್ದರು.