ಗಣಿ ಕಂಪನಿಗಳು ಗ್ರಾಮಗಳನ್ನು ದತ್ತುಪಡೆದು ಅಭಿವೃದ್ದಿ ಪಡಿಸಲು ಒತ್ತಾಯ

ಸಂಜೆವಾಣಿ ವಾರ್ತೆ
ಸಂಡೂರು: ಮಾ: 30: ತಾಲೂಕಿನಾದ್ಯಂತ ಬಹಳಷ್ಟು ಗಣಿ ಕಂಪನಿಗಳಿದ್ದರೂ ಸಹ ಸುಶೀಲಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗಣಿ ಕಂಪನಿಗಳು ಪಂಚಾಯಿತಿಯ 5 ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿ ಪಡಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್.ಅಂಬರೀಶ್ ನಾಯ್ಕ ತಿಳಿಸಿದರು.
ಅವರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ನಡೆದ ಸುಶೀಲಾನಗರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, 5 ಗ್ರಾಮಗಳ ಮುಖಂಡರು ಹಾಗೂ ಎಲ್ಲಾ ಗಣಿ ಕಂಪನಿಗಳ ಮುಖ್ಯಸ್ಥರ ಸಭೆಯನ್ನು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿ ಕೇವಲ 2 ಗಣಿ ಕಂಪನಿಗಳು ಮಾತ್ರ ಭಾಗಿಯಾಗಿವೆ ಉಳಿದವುಗಳ ಬಗ್ಗೆ ಕ್ರಮವಹಿಸಬೇಕೆಂದರು.
ಈ ಸಂದರ್ಭದಲ್ಲಿ ವಕೀಲರಾದ ಮಲ್ಲಿಕಾರ್ಜುನ ಮಾತನಾಡಿ ಸುಶೀಲಾನಗರ ವ್ಯಾಪ್ತಿಯಲ್ಲಿ ಬರುವ ರಾಮಘಡ, ಸಿದ್ದಾಪುರ, ಜೈಸಿಂಗ್‍ಪುರ, ವೆಂಕಟಗಿರಿ 5 ಗ್ರಾಮಗಳ ಅಭಿವೃದ್ದಿಗಾಗಿ ಒಂದೊಂದು ಹಳ್ಳಿಗಳ ಅಭಿವೃದ್ದಿ ಮಾಡಲು ಒಂದೊಂದು ಗಣಿ ಕಂಪನಿ ದತ್ತು ತೆಗೆದುಕೊಳ್ಳಬೇಕು, ಅದರೆ ಜೀನತ್ ಟ್ರಾನ್ಸ್ ಪೋರ್ಟ ಕಂಪನಿಯವರು ಮಾತ್ರ 37 ಜನರಿಗೆ 1 ತಿಂಗಳಿಗೆ 200 ರೂಪಾಯಿ ನೀಡುತ್ತಿರುವುದು ಸರಿಯಲ್ಲ, ಅದರ ಬದಲು 37 ಜನರಿಗೆ ಪ್ರತಿ ತಿಂಗಳಿಗೆ 2 ಸಾವಿರ ರೂಪಾಯಿ ನೀಡಿದಲ್ಲಿ ಜನಗಳ ಜೀವನಕ್ಕೆ ಆಧಾರವಾಗುತ್ತದೆ, ಅ6 ಗಣಿ ಕಂಪನಿಗಳಲ್ಲೆ ಕೇವಲ 2 ಕಂಪನಿಗಳು, ವೆಸ್ಕೋ ಹಾಗೂ ಜೀನತ್ ಟ್ರಾನ್ಸ್ ಪೋರ್ಟ ಮಾತ್ರ ಸಭೆಯಲ್ಲಿ ಭಾಗಿಯಾಗಿದ್ದು 4 ಗಣಿ ಕಂಪನಿಗಳು ಗೈರು ಹಾಜರಾಗಿದ್ದು ಅವರಿಗೆ ನೋಟಿಸ್ ಜಾರಿ ಮಾಡಬೇಕೆಂದು ತಹಶೀಲ್ದಾರ್ ಅವರಿಗೆ ತಿಳಿಸಿದರು. ಅಲ್ಲದೆ ಪ್ರತಿ ಗ್ರಾಮಕ್ಕೂ ಬೈಪಾಸ್ ರಸ್ತೆಗಳಾಗಬೇಕಾಗಿದೆ, ಡಿ.ಎಂ.ಎಫ್. ನಿಧಿಯಿಂದ 22 ಸಾವಿರ ಕೋಟಿ ಹಣ ಇದ್ದು ಅದು ಎಲ್ಲಿ ಹೋಯಿತು, 5 ಹಳ್ಳಿಗಳ ರೈತರಿಗೆ ಎಲ್ಲಾ ಗಣಿ ಕಂಪನಿಗಳು 1 ವರ್ಷಕ್ಕೆ ಪ್ರತಿ ಎಕರೆಗೆ 3 ಸಾವಿರದಂತೆ ಪರಿಹಾರ ನೀಡಬೇಕು, ಅಲ್ಲದೆ ಧೂಳಿನ ಪರಿಹಾರವಾಗಿ 20 ಸಾವಿರ ನೀಡಬೇಕು, ಹಳ್ಳಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಹತೆಗೆ ತಕ್ಕಂತೆ ಕಂಪನಿಗಳಲ್ಲಿ ಉದ್ಯೋಗವನ್ನು ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಬಸವರಾಜ ಅವರು ಮಾತನಾಡಿ ಸಭೆಗೆ ಆಗಮಿಸಲು ಎಲ್ಲಾ ಕಂಪನಿಗಳಿಗೆ ತಿಳಿಸಿದೆ, ಅದರೆ ಹಾಜರಾಗದ ಕಂಪನಿಗಳಿಗೆ ನೋಟಿಸ್ ನೀಡಲಾಗುವುದು, ಚುನಾವಣೆಯ ನಂತರ ಕ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಮಲ್ಲಿಕಾರ್ಜುನ, ಅಧ್ಯಕ್ಷ ಎಲ್.ಅಂಬರೀಶ್‍ನಾಯ್ಕ ಅವರು ಪ್ರತಿಕ್ರಿಯಿಸಿ ಗ್ರಾಮಗಳ ಅಭಿವೃದ್ದಿಗೆ ಸ್ಪಂದಿಸದ ಗಣಿ ಕಂಪನಿಗಳ ವಿರುದ್ಧ ಪ್ರತಿಭಟನೆ ಹಾಗೂ ನ್ಯಾಯಾಲಯದ ಮೊರೆಹೋಗುವುದಾಗಿ ಸಭೆಯ ನಂತರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎಲ್.ಅಂಬರೀಶ್ ನಾಯ್ಕ, ಉಪಾಧ್ಯಕ್ಷ ಎನ್. ಹುಲುಗಪ್ಪ, 22 ಸರ್ವ ಸದಸ್ಯರು, ಲೀಗಲ್ ಅಡ್ವಯಸರ್ ಮಲ್ಲಿಕಾರ್ಜುನ,