ಗಣಿ‌ನಾಡಿನಲ್ಲಿ ದೀಪಾವಳಿ ಇಸ್ಪೀಟ್ ಆಟ ಮೂರು ದಿನದಲ್ಲಿ 705 ಜನರ ಬಂಧನ

ಬಳ್ಳಾರಿ ನ 16 : ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಪೊಲೀಸರು ವಿವಿಧಡೆ ದಾಳಿ ನಡೆಸಿ ಇಸ್ಪೀಟು ಜೂಜಾಟ ಸಂಬಂಧಿಸಿ 89 ಪ್ರಕರಣಗಳನ್ನು ದಾಖಲಿಸಿ, 705 ಜನರನ್ನು ಬಂಧಿಸಿ 8 ಲಕ್ಷದ 84 ಸಾವಿರದ 240 ರೂಪಾಯಿಗಳನ್ನು ವಸಪಡಿಸಿಕೊಂಡಿದೆ ಎಂದು ಎಸ್ಪಿ ಅಡಾವತ್ ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ಅಂಗವಾಗಿ ಸಾರ್ವಜನಿಕವಾಗಿ ಇಸ್ಪೀಟು ಜೂಜಾಟ ತಡೆಯಲು ಡಿವೈಎಸ್ಪಿ, ಸಿಪಿಐ, ಪಿಎಸ್ ಐ ಅವರ ತಂಡಗಳನ್ನು ರಚಿಸಿ ದಾಳಿಗಳನ್ನು ನಡೆಸಲಾಯಿತು.
ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ದೀಪಾವಳಿ ಹಬ್ಬದ ಸಮಯದಲ್ಲಿ ಜೂಜಾಟವನ್ನು ನಿಷೇಧಿಸಿದ ಬಗ್ಗೆ ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಧ್ವನಿವರ್ಧಕ ಪ್ರಕಟಣೆಗಳ ಮೂಲಕ ಪ್ರಚಾರ ಮಾಡಿ ಜಾಗೃತಿ ಮೂಡಿಸಿತ್ತು
ಆದರೂ ಜನ‌ತಮ್ಮ ಚಾಳಿ‌ ಬಿಡಲಿಲ್ಲ‌ ಅದಕ್ಕಾಗಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಿರಂತರ ಗಸ್ತು ಮಾಡಿ ಹಬ್ಬದ ಜೂಜಾಟವನ್ನು ನಿಯಂತ್ರಿಸುವ ಪ್ರಯತ್ನ‌ ಮಾಡಿದ್ದಾರೆ.

ಪೊಲೀಸ್ ಜಾಗೃತಿ ಮತ್ತು ಕಣ್ಣಾವಲನ್ನು ತಪ್ಪಿಸಿ ಈ ಹಬ್ಬದ ಮೂರು ದಿನಗಳ ಅವಧಿಯಲ್ಲಿ ಜೂಜಾಟ ಆಡುತ್ತಿದ್ದ ಜೂಜುಕೋರರ ಮೇಲೆ ದಾಳಿ ಮಾಡಿ 705 ಬಂಧಿಸಿದೆ.
ಪೊಲೀಸ್ ಕಾರ್ಯಾಚರಣೆಯು ನಿರಂತರವಾಗಿದ್ದು, ಯಾವುದೇ ತರಹದ ಜೂಜಾಟ ಕಂಡು ಬಂದಲ್ಲಿ ಕಟ್ಟು ನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದೆಂದು ಅವರು ಹೇಳಿದ್ದಾರೆ.