ಗಣಿಬಾಧಿತ ಜನರಿಂದ ಟೋಲ್ ಹಣ ಸಂಗ್ರಹಿಸುವುದು ಸಮಂಜಸವಲ್ಲ


ಸಂಜೆವಾಣಿ ವಾರ್ತೆ
ಸಂಡೂರು:ಜು:30; ಸಂಡೂರು ತಾಲೂಕಿನಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಸಂದಾಯವಾಗುತ್ತಿದೆ, ಈ ಆದಾಯಕ್ಕೆ ಕಾರಣ ತಾಲೂಕಿನ ಗಣಿಗಾರಿಕೆ ಮತ್ತು ಕಾರ್ಖಾನೆಗಳು, ಗಣಿಭಾದಿತ ತಾಲೂಕಿನ ಜನರಿಂದಲೇ ಟೋಲ್ ಹಣ ಸಂಗ್ರಹಿಸುವುದು ಸಮಾಂಜಸವಲ್ಲ, ಈಗಾಗಲೇ ಗಣಿಗಾರಿಕೆ ಹೊಡೆತಕ್ಕೆ ನಲುಗಿರುವ ಜನರಿಗೆ ಉತ್ತಮ ಸೌಲಭ್ಯ ನೀಡಿ ಸಹಕರಿಸಬೇಕು, ಆದರೆ ಜನರಿಂದಲೇ ಹಣ ಪಡೆಯುವುದು ಯಾವ ನ್ಯಾಯ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೇಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ಅನಂತಕುಮಾರ್ ಅಭಿಪ್ರಾಯಪಟ್ಟಿದ್ದು, ಈ ಕುರಿತು ತೋರಣಗಲ್ಲಿನ ಉಪತಹಶೀಲ್ದಾರ್ ಸುಬ್ಬರಾವ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಅವರು ಮುಂದುವರೆದು ತಾಲೂಕಿನ ಬನ್ನಿಹಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ನೂತನವಾಗಿ ಟೋಲ್ ಗೇಟ ನಿರ್ಮಿಸಿದ್ದು ಆ ಭಾಘದಲ್ಲಿ ಕೇವಲ ಅದಿರು ಇಲಾಖೆಗಳಿಂದಷ್ಟೇ ಟೋಲ್ ಹಣ ಸಂಗ್ರಹಿಸಬೇಕೆಂದ ಬೇಡಿಕೆಯನ್ನು ಮನವಿ ಪತ್ರದ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿರೇಶ್, ರಾಜಶೇಖರಸ್ವಾಮಿ, ನಿಂಗಪ್ಪ, ಹನುಮಂತಪ್ಪ, ಪಂಪಾಪತಿ ಅಜಯಕುಮಾರ ರಾಘವೇಂದ್ರ ಗಾದಲಿಂಗಪ್ಪ ಯರ್ರಿಸ್ವಾಮಿ ಉಪಸ್ಥಿತರಿದ್ದರು 

One attachment • Scanned by Gmail