ಗಣಿನಾಡು: ಇಳಿಮುಖದತ್ತ ಕರೋನಾ ಸೋಂಕು

ಬಳ್ಳಾರಿ ಮೇ 2 1: ಅವಿಭಜಿತ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಏರುಗತ್ತಿಯಲ್ಲಿ ಕಾಣುತ್ತಿದ್ದ ಕೋವಿಡ್ ಸೋಂಕು ಕಳೆದ ಎರೆಡು ದಿನಗಳಿಂದ ಇಳಿಮುಖವಾಗತೊಡಗಿದೆ. ಕಠಿಣ, ಸಂಪೂರ್ಣ ಲಾಕ್‍ಡೌನ್ ಪರಿಣಾಮ ಮತ್ತು ಸಾವಿನ ಸಂಖ್ಯೆಯನ್ನು ಕಂಡು ಜನರು ಒಂದಿಷ್ಟು ಜಾಗೃತರಾಗಿದ್ದರಿಂದ ಸೋಂಕು ಕಡಿಮೆಯಾಗಲು ಕಾರಣ ಇರಬಹುದು.
ಇಲ್ಲಿವರೆಗೆ ಅಧಿಕ ಎಂದರೆ ಪರೀಕ್ಷೆಗೆ ಒಳಗಾದ ಜನರಲ್ಲಿ ಶೇ.63 ರಷ್ಟು ಜನರಲ್ಲಿ ಸೋಂಕು ಇದ್ದುದು ಕಂಡು ಬಂದಿತ್ತು. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನಾಲು 2 ಸಾವಿರ ಸಂಖ್ಯೆ ಮೀರಿ ಇರುತ್ತಿತ್ತು. ಆದರೆ ಮೆ 18 ರಂದು 1799 ಕ್ಕೆ, ಮೊನ್ನೆ ದಿನ 1297 ಕ್ಕೆ, ನಿನ್ನೆಯ ದಿನ ಜಿಲ್ಲೆಯಲ್ಲಿ 4143 ಜನರ ಪರೀಕ್ಷೆ ಮಾಡಿದ್ದು 1109 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆಂದು ಹೇಳಬಹುದು.
ಆದರೆ ಸಾವಿನ ಸಂಖ್ಯೆ ಇನ್ನು ಕಡಿಮೆ ಆಗುತ್ತಿಲ್ಲ. ಅದು ದಿನಾಲು 20 ರ ಮೇಲಿದೆ. ನಿನ್ನೆಯ ದಿನವೂ 22 ಜನರು ಸಾವನ್ನಪ್ಪಿದ್ದು ಇದರಿಂದ ಸೋಂಕಿನಿಂದ ಈ ವರೆಗೆ ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ 1163 ಕ್ಕೆ ತಲುಪಿದೆ. ಸಧ್ಯ ಜಿಲ್ಲೆಯಲ್ಲಿ 17 ಸಾವಿರದ 498 ಜನರು
ಜನರು ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಮತ್ತು ಹೋಮ್ ಐಸೊಲೇಷನ್‍ನಲ್ಲಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 80933 ಜನರಲ್ಲಿ ಈವರೆಗೆ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ 52 ಸಾವಿರದ 272 ಜನರು ಗುಣಮುಖರಾಗಿದ್ದಾರೆ.