ಗಣಿನಾಡಿನ ಗಣರಾಜ್ಯೋತ್ಸವದಲ್ಲಿ ಸಚಿವ ನಾಗೇಂದ್ರ ಧ್ವಜಾರೋಹಣ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.26: ನಗರದ ವಿಮ್ಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ 75 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ರಾಷ್ಟ್ರ ಧ್ವಜಾರೋಹಣ ಮಾಡಿದರು.
ಮಹಾತ್ಮ ಗಾಂಧಿ, ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ. ಪೊಲೀಸ್, ಹೋಂ ಗಾರ್ಡ್ ಎನ್ ಸಿ ಸಿ, ಸೇವಾದಳ,ಸ್ಕೌಟ್, ಶಾಲಾ ಮಕ್ಕಳ ಮೊದಲಾದ 30  ತಂಡಗಳಿಂದ ಪಥಸಂಚಲನೆಯ    ವಂದನೆ ಸ್ವೀಕರಿಸಿದರು.
ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಈ ದಿನ ಭಾರತವು ಸಾರ್ವಭೌಮ ಗಣರಾಜ್ಯವಾಯಿತು. ಇದನ್ನು “ಪ್ರಜಾರಾಜ್ಯೋತ್ಸವ” ಎಂದು ಕರೆಯುತ್ತೇವೆ. ದೇಶಕ್ಕೆ ಪ್ರಜಾಪ್ರಭುತ್ವದ ಆಡಳಿತ ಪದ್ಧತಿಯನ್ನು ಅಳವಡಿಸಿಕೊಂಡ ಸಂಭ್ರಮದ ದಿನ ಇದಾಗಿದೆ.  ಇದಕ್ಕಾಗಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸದಾ ಸ್ಮರಿಸಲೇಬೇಕು.  ಜಾತ್ಯತೀತ ತತ್ವದ ಸಾರ್ವಭೌಮತೆಯನ್ನು ಭಾರತ ಆಳವಡಿಸಿಕೊಂಡಿದ್ದು, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ. ಅನೇಕ ಭಾಷೆಗಳನ್ನು ಮಾತನಾಡುವ ಜನರನ್ನು ಹಾಗೂ ವಿವಿಧ ಸಾಂಸ್ಕೃತಿಕ ಹಿನ್ನಲೆಯನ್ನು ಹೊಂದಿರುವುದು ವೈಶಿಷ್ಟಮಯವಾಗಿದೆ.
ಪ್ರಜಾಪ್ರಭುತ್ವದ ಬೆನ್ನಲುಬಾಗಿರುವ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿ ಬಲಿಷ್ಟ ರಾಷ್ಟ್ರ ರಾಷ್ಟ್ರಕಟ್ಟುವ ಹಾಗೂ ದೇಶದ ಸಮಗ್ರತೆ ಮತ್ತು ಐಕ್ಯತೆಯನ್ನು ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ನಾವು ವಹಿಸಬೇಕಾಗಿದೆ.
ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳ್ಳುತ್ತಿದೆ.
ಗೃಹಜ್ಯೋತಿ ಯೋಜನೆಯಡಿ 2,51,798 ಫಲಾನುಭವಿಗಳು, ಗೃಹಲಕ್ಷ್ಮೀ ಯೋಜನೆಯಡಿ 2,69,668 ಫಲಾನುಭವಿಗಳು,  ಅನ್ನಭಾಗ್ಯ ಯೋಜನೆಯಡಿ 2,61,866 ಫಲಾನುಭವಿಗಳು,  ಶಕ್ತಿ ಯೋಜನೆಯಡಿ 1,28,43,670 ಫಲಾನುಭವಿಗಳು, ಯುವನಿಧಿ ಯೋಜನೆಯನ್ನು 2024ರ ಜನವರಿ 12 ರಂದು ಚಾಲನೆ ನೀಡಲಾಗಿದೆ.
ಇಂದು ಸಂವಿಧಾನದ ಜಾಗೃತಿ ಜಾಥಾ  ಚಾಲನೆ ಗೊಂಡು,  ಜಿಲ್ಲಾದ್ಯಂತ 100 ಗ್ರಾಮ ಪಂಚಾಯಿತಿ ಹಾಗೂ 8 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಚರಿಸಿ ಫೆ. 23 ರಂದು ಕೊನೆಗೊಳ್ಳಲಿದೆ.
ಭಾರತವನ್ನು ಜಗತ್ತಿನ ಅತ್ಯಂತ ಪ್ರಬುದ್ಧ, ಪ್ರಗತಿಪರ, ಭದ್ರ, ಬಲಿಷ್ಟ ರಾಷ್ಟ್ರವನ್ನಾಗಿ ರೂಪಿಸಲು ನಾವೆಲ್ಲಾ ಒಂದಾಗಿ ಪ್ರಯತ್ನಿಸೋಣ. ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸತತ ಪ್ರಯತ್ನಗಳು ಸಾಗುತ್ತಿವೆ. ಮುಂದಿನ ದಿನಗಳಲ್ಲೂ ರಾಜ್ಯದ ಅಭಿವೃದ್ಧಿಗೆ ಸರ್ಕಾರವು ಕಂಕಣ ಬದ್ಧರಾಗಿದ್ದು, ಜನತೆಯ ಸಹಕಾರದೊಂದಿಗೆ ಪ್ರಗತಿಯನ್ನು ಸಾಧಿಸಲಿದೆಂಬ ಆಶಯವನ್ನು ವ್ತಕ್ತಪಡೊಸಿದರು..
ಪಥಸಂಚನೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸರ್ಕಾರಿ ಕಿವುಡ ಮತ್ತು ಮೂಗ, ಎಂಜಿ.ಎಂ ಮತ್ತು ಬಾಲ ಭಾರತಿ ಶಾಲೆಗಳು ಕ್ರಮವಾಗಿ ಮೊದಲ, ದ್ವಿತೀಯ ಹಾಗು ತೃತೀಯ ಬಹುಮಾನ ಪಡೆದರೆ. ಪ್ರೌಡಶಾಲಾ ವಿಭಾಗದಲ್ಲಿ ಸಂತಜಾನ್ , ಸತ್ಯ ಮತ್ತಯ ಬಂಡಿಹಟ್ಟಿ ಸರ್ಕಾರಿ ಪ್ರೌಡಶಾಲೆಗಳು ಕ್ರಮವಾಗಿ ಮೊದಲ, ದ್ವಿತೀಯ ಹಾಗು ತೃತೀಯ ಬಹುಮಾನ ಪಡೆದರು
ನಂತರ ಕ್ರೀಡೆ, ಸಾಹಿತ್ಯ ಸಾಂಸ್ಕೃತಿಕ ಕಲೆಗಳಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸಲಾಯ್ತು. ಬಳಿಕ ನೂರಾರು ವಿದ್ಯಾರ್ಥಿಗಳಿಂದ ಅಕರ್ಷಕ ಕವಾಯತ್, ನೃತ್ಯ ಪ್ರದರ್ಶನ ನಡೆಯಿತು. ಸಮಾರಂಭದಲ್ಲಿ ನಗರ ಶಾಸಕ ಭರತ್ ರೆಡ್ಡಿ, ಡಿಸಿ ಪ್ರಶಾಂತ್  ಕುಮಾರ್, ಎಸ್ಪಿ ರಂಜಿತ್ ಕುಮಾರ್ ಮೊದಲಾದವರು ಇದ್ದರು.