ಗಣಿನಾಡಿನಲ್ಲಿ ಭಕ್ತಿಭಾವದ ರಂಜಾನ್ ಪ್ರಾರ್ಥನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.22: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಕಾಲ ಉಪವಾಸ  ವೃತ ಆಚರಿಸಿ ಅಂತ್ಯಗೊಳಿಸಿದ ಮುಸ್ಲಿಂ‌ ಸಮಾಜದವರು. ಇಂದು
ಅಂತ್ಯಗೊಳಿಸಿ ರಮ್ಜಾನ್ ಹಬ್ಬ ಆಚರಿಸಿದರು.
ಇದರಂಗವಾಗಿ ಇಂದು ನಗರದ  ಈದ್ಗಾ ಮೈದನಾಕ್ಕೆ ಹೊಸ ಬಟ್ಟೆ ತೊಟ್ಟು, ನಮಾಜ್ ಮಾಡಿ ಪರಸ್ಪರ ಶುಭಾಶಯ‌ ವಿನಿಮಯ ಮಾಡಿಕೊಂಡರು.
ಜಿಲ್ಲೆಯ ಇತರೆ ತಾಲೂಕು ಕೇಂದ್ರಗಳು ಮತ್ತು ಹಳ್ಳಿಗಳಲ್ಲೂ  ರಮ್ಜಾನ್ ಹಬ್ಬವನ್ನು ಮುಂಜಾನೆಯೆ ನಮಾಜ್ ಮಾಡುವ ಮೂಲಕ‌ ಆಚರಿಸಲಾಯಿತು.
 ರಾಜಕೀಯ:
ಚುನಾವಣೆ ಹಿನ್ನಲೆಯಲ್ಲಿ  ಇಂದು ಈದ್ಗಾ ಮೈದಾನದಲ್ಲಿ ನಡೆದ ಪವಿತ್ರ ರಂಜಾನ್ ಪ್ರಾರ್ಥನೆಯಲ್ಲಿ ಕಾಂಗ್ರೆಸ್  ಬಿಜೆಪಿ ಅಭ್ಯರ್ಥಿಗಳು, ಶಾಸಕರು,ಸಚಿವರು, ಸಂಸದರು  ಮುಸ್ಲಿಂ ಬಾಂಧವರ ಜೊತೆಗೂಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬಳ್ಳಾರಿ ನಗರದ ಬಿಜೆಪಿ ಅಭ್ಯರ್ಥಿಯಾಗಿರುವ ಗಾಲಿ ಸೋಮಶೇಖರ ರೆಡ್ಡಿ,   ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತರೆಡ್ಡಿ. ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ನಾಗೇಂದ್ರ, ಸಚಿವ ಶ್ರೀರಾಮುಲು, ರಾಜ್ಯ ಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಪ್ರಾರ್ಥನೆಯಲ್ಲಿ ಮುಸ್ಲೀ ಧರ್ಮಗುರುಗಳ ಜೊತೆ ಪ್ರಾಥನೆಯಲ್ಲಿ ಭಾಗಿಯಾಗಿದ್ದರು. 
ಅಭ್ಯರ್ಥಿಗಳು ನಮಾಜ್ ಮುಗಿದ ನಂತರ ಶುಭಾಶಯ ಕೋರಿ ಮುಸ್ಲಿಂ ಬಾಂಧವರ ಬೆಂಬಲ ಕೋರಿದ್ದು ಕಂಡು ಬಂತು.

One attachment • Scanned by Gmail