ಗಣಿನಾಡಿನಲ್ಲಿ ಕೋವಿಡ್ ಸಾವಿನ ಕೇಕೆ ಇಂದು 16 ಜನ ಬಲಿ

ಬಳ್ಳಾರಿ ಏ 25 : ಮಹಾ ಮಾರಿ ಕೋವಿಡ್ ನ ಎರಡನೇ ಅಲೆಗೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಇಂದು 16 ಜನ‌ ಬಲಿಯಾಗಿದ್ದು. ಸಾವಿನ‌ ಸರಣಿ ಮುಂದುವರೆದಿದೆ. ಈ ವರಗೆ 656 ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ
ಇಂದು 732 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಕೋವಿಡ್ ನ‌ ಮೊದಲ‌ ಹಂತದಲ್ಲಿ 596 ಜನರು ಸಾವನ್ನಪ್ಪಿದ್ದರು. ನಂತರ ಎರಡನೇ ಅಲೆಯಲ್ಲಿ ಇಂದಿನ ಐದು ಜನ ಸೇರಿ 60 ಜನರು ಈ ವರಗೆ ಸಾವನ್ನಪ್ಪಿದ್ದು ಒಟ್ಟಾರೆ ಸಾವಿನ ಸಂಖ್ಯೆ 656 ಕ್ಕೇರಿದೆ

ಇಂದು 3556 ಜನರನ್ನು ಪರೀಕ್ಷೆ ಮಾಡಿದ್ದು ಅವರಲ್ಲಿ 732ಜನರಲ್ಲಿ ಕೋವಿಡ್ ಕಾಣಿಸಿಕೊಂಡುದ್ದು. ಇದರಿಂದಾಗಿ ಜಿಲ್ಲೆಯಲ್ಲಿ 5536 ಜನರು ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಮತ್ತು ಹೋಮ್ ಐಸೊಲೇಷನ್ ನಲ್ಲಿದ್ದಾರೆ.
ಇಂದು 227 ಜನ ಗುಣಮುಖರಾಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 46635 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.