ಗಣಿನಾಡಿನಲ್ಲಿ ಕೋವಿಡ್ ಗೆ ಮುಂದುವರೆದ ಸಾವಿನ ಸರಣಿ ಇಂದು 5 ಜನ ಬಲಿ

ಬಳ್ಳಾರಿ ಏ 20 : ಮಹಾ ಮಾರಿ ಕೋವಿಡ್ ನ ಎರಡನೇ ಅಲೆಗೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಇಂದು ಐದು ಜನ‌ ಬಲಿಯಾಗಿದ್ದು. ಸಾವಿನ‌ ಸರಣಿ ಮುಂದುವರೆದಿದೆ. ಈ ವರಗೆ 622 ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ
ಇಂದು 406 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಕೋವಿಡ್ ನ‌ ಮೊದಲ‌ ಹಂತದಲ್ಲಿ 596 ಜನರು ಸಾವನ್ನಪ್ಪಿದ್ದರು. ನಂತರ ಎರಡನೇ ಅಲೆಯಲ್ಲಿ ಇಂದಿನ ಐದು ಜನ ಸೇರಿ 26 ಜನರು ಈ ವರಗೆ ಸಾವನ್ನಪ್ಪಿದ್ದು ಒಟ್ಟಾರೆ ಸಾವಿನ ಸಂಖ್ಯೆ 622 ಕ್ಕೇರಿದೆ

ಇಂದು 3541 ಜನರನ್ನು ಪರೀಕ್ಷೆ ಮಾಡಿದ್ದು ಅವರಲ್ಲಿ 406 ಜನರಲ್ಲಿ ಕೋವಿಡ್ ಕಾಣಿಸಿಕೊಂಡುದ್ದು. ಇದರಿಂದಾಗಿ ಜಿಲ್ಲೆಯಲ್ಲಿ 2294 ಜನರು ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಮತ್ತು ಹೋಮ್ ಕ್ವಾರಂಟೈನ್ ನಲ್ಲಿ ಇದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 42745 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಎರಡನೇ ಅಲೆಯಲ್ಲಿ ಈ ವರಗೆ ಕೇವಲ‌ ಒಂದು ಎರೆಡು ಸಾವು‌‌ಕಾಣಿಸುತ್ತಿತ್ತು ಈಗ ಒಂದೇ ದಿನ ಐದು, ಆರು ಜನ‌ ಬಲಿಯಾಗುತ್ತಿರುವುದು ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ‌ ಮೂಡಿಸಿದೆ