ಗಣಿನಾಡಿನಲ್ಲಿ ಕುಸಿಯುತ್ತಿರುವ ಕರೋನಾ ಸೋಂಕು 500 ಕ್ಕಿಳಿದ ಸಕ್ರೀಯ ಪ್ರಕರಣ

ಬಳ್ಳಾರಿ ನ 12 : ರಾಜ್ಯದಲ್ಲಿ ಬೆಂಗಳೂರನ್ನು ಬಿಟ್ಟರೆ ಅತಿ‌ ಹೆಚ್ಚು ಕೋವಿಡ್ -19 ಸೋಂಕಿನ ಮತ್ತು ಸಾವಿನ ಪ್ರಕರಣಗಳು ಕಂಡು ಬರುತ್ತಿದ್ದ ಗಣಿ‌ನಾಡು ಬಳ್ಳಾರಿ ಜಿಲ್ಲೆಯಲ್ಲಿ ಇದೀಗ ದಿನೇ ದಿನೇ ಕುಸಿಯುತ್ತಿದ್ದು. ಸಕ್ರಿಯ ಪ್ರಕರಣಗಳ ಸಂಖ್ಯೆ 500 ಕ್ಕೆ ಇಳಿದಿದೆ.
ಇಂದು 2293 ಜನರ ಗಂಟಲ ದ್ರವ ಪರೀಕ್ಷೆ ಮಾಡಿದ್ದು ಅವರಲ್ಲಿ ಕೇವಲ 41 ಜನರಲ್ಲಿ ಸೋಂಕು‌ ಕಾಣಿಸಿ ಕೊಂಡಿದೆ.

ಇನ್ನು ಆಸ್ಪತ್ರೆಗಳಲ್ಲಿ ಕೇವಲ‌ 500 ಸಕ್ರಿಯ ಪ್ರಕರಣಗಳಿದ್ದು. ಮೂರು ಜನ ಇಂದು ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಿಂದ 64 ಜನ ಗುಣಮುಖರಾಗಿ‌ ಹೊರ ಬಂದಿದ್ದಾರೆ.

ಇಲ್ಲಿವರಗೆ ಜಿಲ್ಲೆಯಲ್ಲಿ 164977 ರ‌್ಯಾಪಿಡ್ ಮತ್ತು 129409 ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ್ದು 37 ಸಾವಿರದ 785 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ 561 ಜನ‌ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರೆ. 36 ಸಾವಿರದ 724 ಜನರು ಗುಣಮುಖರಾಗಿದ್ದಾರೆಂದು‌ ಜಿಲ್ಲಾಧಿಕಾರಿ ಎಸ್.ಎಸ್.ನಕಯಲ್ ಅವರು ತಿಳಿಸಿದ್ದಾರೆ.