ಗಣಿನಾಡಿನಲ್ಲಿ ಕುಸಿಯುತ್ತಿರುವ ಕರೋನಾ ಸಾವಿರದೊಳಗೆ ಸಕ್ರೀಯ ಪ್ರಕರಣ

ಬಳ್ಳಾರಿ:ನ.3- ರಾಜ್ಯದಲ್ಲಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕೋವಿಡ್ -19 ಸೋಂಕಿನ ಮತ್ತು ಸಾವಿನ ಪ್ರಕರಣಗಳು ಕಂಡು ಬರುತ್ತಿದ್ದ ಗಣಿನಾಡಿನಲ್ಲಿ ಕೋವಿಡ್ ಪ್ರಕರಣಗಳು ಇದೀಗ ದಿನೇ ದಿನೇ ಕಡಿಮೆಯಾಗುತ್ತಿದೆ.
ನಿನ್ನೆ 1427 ಜನರ ಗಂಟಲ ದ್ರವ ಪರೀಕ್ಷೆ ಮಾಡಿದ್ದು ಅವರಲ್ಲಿ ಕೇವಲ 60 ಜನರಲ್ಲಿ ಸೋಂಕು ಕಾಣಿಸಿ ಕೊಂಡಿದೆ.
ಇನ್ನು ಆಸ್ಪತ್ರೆಗಳಲ್ಲಿ ಕೇವಲ 841 ಸಕ್ರಿಯ ಪ್ರಕರಣಗಳಿದ್ದು. ಒಬ್ಬರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಿಂದ 155 ಜನ ಗುಣಮುಖರಾಗಿ ಹೊರ ಬಂದಿದ್ದಾರೆ.
ಇಲ್ಲಿವರಗೆ ಜಿಲ್ಲೆಯಲ್ಲಿ 157437 ರ್ಯಾಪಿಡ್ ಮತ್ತು 116948 ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ್ದು 37 ಸಾವಿರದ 344 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ 540 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರೆ. 35 ಸಾವಿರದ 963 ಜನರು ಗುಣಮುಖರಾಗಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.