ಗಣಿನಾಡಿನಲ್ಲಿ ಐದು ದಿನದಲ್ಲಿ ಕೋವಿಡ್ ಗೆ 76 ಜನ ಬಲಿ

ಬಳ್ಳಾರಿ: ಮಹಾ ಮಾರಿ ಕೋವಿಡ್ ನ ಎರಡನೇ ಅಲೆಗೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಇಂದಿನ 16 ಜನ‌ ಸೇರಿ ಕಳೆದ ಐದು ದಿನದಲ್ಲಿ 76 ಜನ ಬಲಿಯಾಗಿದ್ದಾರೆ.

ಈ ವರಗೆ 716 ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು 896 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಿನ್ನೆ 8 ಜನ ಸಾವನ್ನಪ್ಪಿದ್ದರು.

ಜಿಲ್ಲೆಯಲ್ಲಿ ಕೋವಿಡ್ ನ‌ ಎರಡನೇ ಅಲೆಯಲ್ಲಿ ಇಂದಿನ 16 ಜನ ಸೇರಿ 129 ಜನರು ಈ ವರಗೆ ಸಾವನ್ನಪ್ಪಿದ್ದು ಒಟ್ಟಾರೆ ಸಾವಿನ ಸಂಖ್ಯೆ 716 ಕ್ಕೇರಿದೆ

ಇಂದು 4389 ಜನರನ್ನು ಪರೀಕ್ಷೆ ಮಾಡಿದ್ದು ಅವರಲ್ಲಿ 896 ಜನರಲ್ಲಿ ಕೋವಿಡ್ ಕಾಣಿಸಿಕೊಂಡುದ್ದು. ಇದರಿಂದಾಗಿ ಜಿಲ್ಲೆಯಲ್ಲಿ 7946 ಜನರು ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಮತ್ತು ಹೋಮ್ ಐಸೊಲೇಷನ್ ನಲ್ಲಿದ್ದಾರೆ. ಇಂದು 305 ಜನ ಗುಣಮುಖರಾಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 50339 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬಳ್ಳಾರಿಯಲ್ಲಿ 3565, ಸಂಡೂರು 944, ಹೊಸಪೇಟೆ 1509 ಜನ ಸೋಂಕಿನಿಂದ ಬಳಲುತ್ತಿದ್ದಾರೆ.