ಗಣಿನಾಡಿನಲ್ಲಿ ಇಂದು ಸಹ ಕೋವಿಡ್ ಗೆ 18 ಜನ ಬಲಿ

ಬಳ್ಳಾರಿ ಏ 27 : ಮಹಾ ಮಾರಿ ಕೋವಿಡ್ ನ ಎರಡನೇ ಅಲೆಗೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಇಂದು ಸಹ 18 ಜನ‌ ಬಲಿಯಾಗಿದ್ದಾರೆ.

ಈ ವರಗೆ 692 ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ
ಇಂದು 907 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ನಿನ್ನೆ 18 ಜನ ಸಾವನ್ನಪ್ಪಿದ್ದರು.

ಜಿಲ್ಲೆಯಲ್ಲಿ ಕೋವಿಡ್ ನ‌ ಎರಡನೇ ಅಲೆಯಲ್ಲಿ ಇಂದಿನ 18 ಜನ ಸೇರಿ 96 ಜನರು ಈ ವರಗೆ ಸಾವನ್ನಪ್ಪಿದ್ದು ಒಟ್ಟಾರೆ ಸಾವಿನ ಸಂಖ್ಯೆ 692 ಕ್ಕೇರಿದೆ

ಇಂದು 5943 ಜನರನ್ನು ಪರೀಕ್ಷೆ ಮಾಡಿದ್ದು ಅವರಲ್ಲಿ 907 ಜನರಲ್ಲಿ ಕೋವಿಡ್ ಕಾಣಿಸಿಕೊಂಡುದ್ದು. ಇದರಿಂದಾಗಿ ಜಿಲ್ಲೆಯಲ್ಲಿ 6587 ಜನರು ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಮತ್ತು ಹೋಮ್ ಐಸೊಲೇಷನ್ ನಲ್ಲಿದ್ದಾರೆ.
ಇಂದು 272 ಜನ ಗುಣಮುಖರಾಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 48328 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬಳ್ಳಾರಿಯಲ್ಲಿ 30827, ಸಂಡೂರು 854, ಹೊಸಪೇಟೆ 1148 ಜನ ಸೋಂಕಿನಿಂದ ಬಳಲುತ್ತಿದ್ದಾರೆ.