ಗಣಿನಾಡಿನಲ್ಲಿ‌ ಕರೋನಾ:ನಿಲ್ಲದ ಸಾವು ಸೋಂಕಿನ ಪ್ರಕರಣ ಕುಸಿತ

ಬಳ್ಳಾರಿ ನ 16 : ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದೆ. ಆದರೆ ಈ ಸೋಕಿನಿಂದ ಸಾಯುವವರ ಪ್ರಮಾಣ ಮಾತ್ರ ನಿಂತಿಲ್ಲ.
ದಿನಾಲು ಇಬ್ಬರು ಅಥವಾ ಮೂರು ಜನರು ಕರೋನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ ಸೋಂಕು ಬಂದವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತೇವೆ ಎಂದು, ಇನ್ನು‌ ಕೆಲವರು ಪರೀಕ್ಷೆ ಮಾಡದೇ ಇದ್ದು ತೀವ್ರ ಅನಾರೋಗ್ಯಕ್ಕೆ ಒಳಗಾದ ಮೇಲೆ ಆಸ್ಪತ್ರೆಗೆ ಬರುವುದರಿಂದ ಸಾವಿನ ಸಂಖ್ಯೆ ಮುಂದುವರೆದಿದೆ ಎನ್ನುತ್ತಿದೆ ಆರೋಗ್ಯ ಇಲಾಖೆ.

ಇಂದು 1399 ಜನರ ಗಂಟಲ ದ್ರವ ಪರೀಕ್ಷೆ ಮಾಡಿದ್ದು ಅವರಲ್ಲಿ ಕೇವಲ 15 ಜನರಲ್ಲಿ ಸೋಂಕು‌ ಕಾಣಿಸಿ ಕೊಂಡಿದೆ.
ಆದರೆ ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮಹಳ್ಳಿ,
ಒಂದೂ ಪ್ರಕರಣ ಪತ್ತೆಯಾಗಿಲ್ಲ. ಇ‌ನ್ನು ಬಳ್ಳಾರಿ ನಗರದಲ್ಲಿ‌ ಕೇವಲ ಮೂರು‌ ಜನರಲ್ಲಿ ಪಾಸಿಟಿವ್ ಅಗಿದೆ.

ಇನ್ನು ಆಸ್ಪತ್ರೆಗಳಲ್ಲಿ ಕೇವಲ‌ 353 ಸಕ್ರಿಯ ಪ್ರಕರಣಗಳಿದ್ದು. ಇಬ್ಬರು ಇಂದು ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಿಂದ 50 ಜನ ಗುಣಮುಖರಾಗಿ‌ ಹೊರ ಬಂದಿದ್ದಾರೆ.
ಇಲ್ಲಿವರಗೆ ಜಿಲ್ಲೆಯಲ್ಲಿ 168151 ರ‌್ಯಾಪಿಡ್ ಮತ್ತು 135990 ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ್ದು 37 ಸಾವಿರದ 923 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ 571 ಜನ‌ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರೆ. 36 ಸಾವಿರದ 999 ಜನರು ಗುಣಮುಖರಾಗಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕಯಲ್ ಅವರು ತಿಳಿಸಿದ್ದಾರೆ