ಗಣಿನಾಡಲ್ಲಿ 437 ಕ್ಕಿಳಿದ ಕೋವಿಡ್ ಪ್ರಕರಣಗಳು

 • 1877 ಜನರು ಗುಣಮುಖ,
 • 8 ಜನರು ಸಾವು
  ಬಳ್ಳಾರಿ:ಜೂ.1- ಗಣಿನಾಡು ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ನಿನ್ನೆ ಸೋಮವಾರದ ಜಿಲ್ಲಾಡಳಿತ ನೀಡಿರುವ ವರದಿ ಪ್ರಕಾರ 1877 ಜನರು ಸೋಂಕಿನಿಂದ ಗುಣಮುಖರಾಗಿದ್ದು. ಇದು ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಇಳೆಕಾಗುತ್ತಿರುವುದನ್ನು ಸೂಚಿಸುತ್ತಿದೆ.
  ಕಳೆದ ವಾರ 2 ಸಾವಿರದ ಗಡಿ ದಾಟುತ್ತಿದ್ದ ಸೋಂಕು ಪತ್ತೆಯಾಗುವವರ ಸಂಖ್ಯೆ ಇದೀಗ ಮೂರಂಕಿಗೆ ಇಳಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 9021 ಗೆ ಇಳಿಕೆಯಾಗಿದೆ. ನಿನ್ನೆ ವರದಿ ಪ್ರಕಾರ ಪರೀಕ್ಷೆಯ ಸಂಖ್ಯೆಯೂ ಕಡಿಮೆ ಇದೆ. 2178 ಜನರ ಗಂಟಲ ದ್ರವ ಪರೀಕ್ಷೆಯಿಂದ ಬಳ್ಳಾರಿ ತಾಲೂಕು75 , ಸಂಡೂರು 44, ಸಿರುಗುಪ್ಪ 24, ಕೂಡ್ಲಿಗಿ 55, ಹಡಗಲಿ 43, ಹೊಸಪೇಟೆ 94, ಹ.ಬೊ.ಹಳ್ಳಿ 43, ಹರಪನಹಳ್ಳಿ 56 ಸೇರಿ 437 ಜನರಲ್ಲಿ ಸೋಂಕು ಪತ್ತೆಯಾಗಿದೆ.
  ಸಾವಿನಲ್ಲೂ ಇಳೆಕೆ:
  ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಸಾಯುವವರ ಸಂಖ್ಯೆಯೂ ಒಂದಷ್ಟು ಕಡಿಮೆಯಾಗಿದೆ. ಕಳೆದ ವಾರ ಪ್ರತಿದಿನ 20ಕ್ಕೂ ಹೆಚ್ಚು ಇದ್ದ ಸಾಯುವವರ ಸಂಖ್ಯೆ ಕಳೆದ ಮೂರ್ನಾಲ್ಕು ದಿನಗಳಲ್ಲಿ 20ರೊಳಗೆ ಇದೆ. ಭಾನುವಾರ ಕೋವಿಡ್ ಸೋಂಕಿಗೆ 13, ನಿನ್ನೆ 8 ಜನ ಸತ್ತಿದ್ದಾರೆ. ಸಾವಿನ ಸಂಖ್ಯೆ 1358ಕ್ಕೆ ಏರಿಕೆಯಾಗಿದೆ.
  ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ಮುಂದಾಗಿರುವ ಆರೋಗ್ಯ ಇಲಾಖೆ ಅಷ್ಟೇ ಪ್ರಮಾಣದಲ್ಲಿ ತಪಾಸಣೆ ನಡೆಸಿ ಸೋಂಕಿತರನ್ನು ಪತ್ತೆಹಚ್ಚುತ್ತಿದೆ. ಈವರೆಗೆ 2,57036 ರ್ಯಾಪಿಡ್ ಆಂಟಿಜೆನ್, 5,66846 ಆರ್‍ಟಿಪಿಸಿಆರ್ ಸೇರಿ ಒಟ್ಟು ಈವರೆಗೆ 8,23,882 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.