ಗಣಿನಾಡನಲ್ಲಿ 600 ಕ್ಕೆ ತಲುಪಿದ ಕೋವಿಡ್ ಸಾವು

ಬಳ್ಳಾರಿ ಏ 07 : ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುವುದು ನಿರಂತರವಾಗಿದ್ದು ಇಂದು ಒಬ್ಬರು ಸಾವನ್ನಪ್ಪಿದ್ದು ಇದರಿಂದಾಗಿ ಈ ಸೋಂಕಿನಿಂದ ಸತ್ತವರ ಸಂಖ್ಯೆ ಗಣಿನಾಡಿನಲ್ಲಿ 600 ಕ್ಕೆ ತಲುಪಿದೆ.

ಈವರಗೆ ಜಿಲ್ಲೆಯಲ್ಲಿ 625925 ಜನರ ಗಂಟಲ ದ್ರವ ಪರೀಕ್ಷೆ ಮಾಡಿದ್ದು, ಅವರಲ್ಲಿ 40133 ಜನರಲ್ಲಿ ಸೋಂಕು ಕಾಣಿಸಿ‌ಕೊಂಡಿದೆ. ಸಧ್ಯ ಇಂದಿನ 87 ಸೇರಿ‌ 501 ಜನ ಪಾಸಿಟಿವ್ ಇದ್ದಾರೆ.