ಗಣಿಧೂಳು ನಮಗೆ ಲಾಭಾ ಟೋಲ್ ಮಾಲೀಕರಿಗೆ

ಸಂಡೂರು: ಜ:13 ಗಣಿಧೂಳು ಒಂದು ಕಡೆಯಾದರೆ ನಿರಂತರ ಹೊಗೆ ಸೂಸುವ ಲಾರಿಗಳ ಅರ್ಭಟ ಅದರಲ್ಲಿಯೇ ಟೋಲ್ ಸಂಗ್ರಹಿಸಿ ಮಾಲೀಕನಿಗೆ ಒಪ್ಪಿಸುವ ನೌಕರನಿಗೆ ಮಾತ್ರ ಸರಿಯಾದ ವೇತನವಾಗಲಿ, ಮೂಲಭೂತ ಸೌಲಭ್ಯಗಳಾಗಲಿ ಇಲ್ಲದಂತಹ ದುಸ್ಥಿತಿಯಲ್ಲಿ ಟೋಲ್‍ಗೇಟ್ ನೌಕರನದ್ದಾಗಿದೆ, ಅದ್ದರಿಂದ ತಕ್ಷಣ ವೇತನ ಹೆಚ್ಚಳ ಮಾಡುವುದರ ಜೊತೆಗೆ ತಡೆ ಹಿಡಿದ ವೇತನವನ್ನು ನೀಡಬೇಕು ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಬಿ.ಎಂ. ಉಜ್ಜಿನಯ್ಯ ಅಗ್ರಹಿಸಿದರು.
ಅವರು ಇಂದು ತಾಲೂಕಿನ 15ಕ್ಕೂ ಹೆಚ್ಚು ಸಂಘಟನೆಗಳು ಟೋಲ್‍ಗೇಟ್ ನೌಕರರ ದುಸ್ಥಿತಿಯನ್ನು ಕಂಡು ಕೈಜೋಡಿಸಿದ ಸಂಘಟನೆಗಳ ಪ್ರತಿಭಟನೆ ಹಾಗೂ ಮನವಿ ಪತ್ರ ನೀಡಿ ಮಾತನಾಡಿ ಪ್ರಮುಖವಾಗಿ ಟೋಲ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವವರು ಬಡ ರೈತನ ಮಕ್ಕಳು, ಒಂದು ಕಡೆ ಕೃಷಿ ಜಮೀನು ಕಸಿದರು, ಮತ್ತೊಂದು ಕಡೆ ಉದ್ಯೋಗ ಕಸಿದರು, ಇದರಿಂದ ಸಿಕ್ಕ ಕೆಲಸಗಳನ್ನು ಮಾಡಿ ಕಳೆದ 10 ವರ್ಷಗಳಿಂದ ಟೋಲ್‍ಗೇಟ್‍ನಲ್ಲಿ ಕೆಲಸ ಮಾಡಿ ಬದುಕನ್ನು ಸಾಗಿಸುತ್ತಿರುವ ನೌಕರನ ಸ್ಥಿತಿ ಚಿಂತಾಜನಕವಾಗಿದೆ, ಹಲವಾರುಬಾರಿ ಶಾಸಕರ, ತಾಲೂಕು ಆಡಳಿತದ ಗಮನಕ್ಕೂ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ, ಹೋರಾಟವೇ ಅಂತಿಮ ಮಾರ್ಗ ಎನ್ನುವಂತಾಗಿದೆ, ಅದ್ದರಿಂದ ತಕ್ಷಣ ಟೋಲ್ ನೌಕರರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಟೋಲ್ ಸಿಬ್ಬಂದಿಯ ಮುಖಂಡ ಮೆಹಬೂಬ್ ಭಾಷಾ ಮಾತನಾಡಿ ಪ್ರಮುಖವಾಗಿ ಟೋಲ್ ನೌಕರರಿಗೆ ವೈದ್ಯಕೀಯ ಸೌಲಭ್ಯ ನೀಡಬೇಕು, ವೇತನ ಹೆಚ್ಚಳದ ಜೊತೆಗೆ ಬಾಕಿ ವೇತನ ನೀಡಬೇಕು, ಇನಾಂ ಭತ್ತೆ ಬೋನಸ್ ನೀಡಬೇಕು, ನೌಕರರ ನಿರಂತರ ಕೆಲಸ ನಿಮಿತ್ತ ಅವರಿಗೆ ಊಟದ ವ್ಯವಸ್ಥೆ ಮಾಡಬೇಕು, ಕೆಲಸ ಮುಗಿದ ನಂತರ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು, 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸುರಕ್ಷತೆ ಮತ್ತು ಅಂಬ್ಯೂಲೆನ್ಸ್ ವ್ಯವಸ್ಥೆ ಮಾಡಬೇಕು, ಟೋಲ್ ವ್ಯಾಪ್ತಿಯ ಅಪಘಾತಗಳಿಗೆ ಅಂಬ್ಯೂಲೆನ್ಸ್ ವ್ಯವಸ್ಥೆ ಮಾಡಬೇಕು, ರಾತ್ರಿ ಪಾಳಿಯಲ್ಲಿ ಹಣ ಸಂಗ್ರಹ ಮಾಡಬೇಕಾಗಿದ್ದು ಅದಕ್ಕೆ ಬೇಕಾದ ರಕ್ಷಣೆ ನಿಡಬೇಕು, ಪ್ಲಾಜಾಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಇಲ್ಲವಾದಲ್ಲಿ ಪರ್ಯಾಯ ವಿದ್ಯುತ್ ವ್ಯವಸ್ಥೆ ಮಾಡಬೇಕು, ಕಾಡು ಪ್ರಾಣಿಗಳ ರಕ್ಷಣೆ ವ್ಯವಸ್ಥೆ ಮಾಡಬೇಕು, ತಿಂಗಳಿಗೆ ಕನಿಷ್ಠ ಕೂಲಿಯಾಗಿ ತಿಂಗಳಿಗೆ 12000 ಸಾವಿರ ರೂಪಾಯಿ ನೀಡಬೇಕು ಕಾರ್ಮಿಕರಿಗೆ ಅನ್ಯಾವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನು ಉಗ್ರವಾದ ಹೋರಾಟ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಸಂಘಟನೆಗಳಾದ ಕರ್ನಾಟಕ ರಾಜ್ಯ ಹಸಿರುರೈತ ಸಂಘ, ರಕ್ಷಣಾವೇದಿಕೆ, ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ಕರಾವೇ, ಗಣಿ ಕಾರ್ಮಿಕರ ಸಂಘ, ಪ್ರಜಾಸೇನೆ, ಕ್ರಾಂತಿ ರೈತ ಸಂಘ, ಅಂಬೇಡ್ಕರ್ ಸಂಘ, ಪ್ರಾಂತ್ಯ ರೈತ ಸಂಘ ಎಲ್ಲಾ ಸಂಘಗಳ ಅಧ್ಯಕ್ಷರು ಮಾತನಾಡಿದರು.
ಅಲ್ಲದೆ ಮುಖಂಡರಾದ ಕರ್ನಾಟಕ ಪ್ರಾಂತ ರೈತಸಂಘದ ಅಧ್ಯಕ್ಷ ಯು.ತಿಪ್ಪೇಸ್ವಾಮಿ, ಕರಾವೇ ಅಧ್ಯಕ್ಷ ಪಿ.ರಾಜು, ರೈತ ಸಂಘದ ಅಧ್ಯಕ್ಷ ಬಿ.ಎಂ. ಉಜ್ಜಿನಯ್ಯ, ಶ್ರೀಪಾದ ಸ್ವಾಮಿ, ಜಿಲ್ಲಾ ರೈತ ಮುಖಂಡ ಎಂ.ಎಲ್.ಕೆ. ನಾಯಡು, ಕರಾವೇ ಪ್ರಜಾಸತ್ತಾತ್ಮಕ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಅರ್. ಕುಮಾರಸ್ವಾಮಿ, ಗಣಿ ಕಾರ್ಮಿಕರ ಸಂಘದ ಯರಿಗೌಡ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಹೆಗಡೆ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಶ್ರೀಪಾದಸ್ವಾಮಿ, ಹನುಮಂತರಡ್ಡಿ, ಟೋಲ್ ಗೇಟ್ ಸಿಬ್ಬಂದಿಗಳ ಮುಖಂಡರಾದ ಗಣೇಶ್, ಮೆಹಬೂಬ್ ಭಾಷಾ, ವಿನಾಯಕ, ಶಂಕರ್ ಇತರರು. ನೊಂದ 30 ಟೋಲ್ ಸಿಬ್ಬಂದಿಗಳು ಇತರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು ತಹಶೀಲ್ದಾರ್ ರಶ್ಮಿಯವರಿಗೆ ಮನವಿ ಪತ್ರ ಸಲ್ಲಿಸಿದರು.