ಕಲಬುರಗಿ,ಸೆ.25:“ಗಣಿತ ಮತ್ತು ಅಂಕಿಅಂಶಗಳು ಗಣಕ ವಿಜ್ಞಾನಕ್ಕೆ ಆಧಾರವಾಗಿವೆ. ಇವುಗಳಿಲ್ಲದೆ, ಸಮಾಜದಲ್ಲಿ ಕಂಡುಬರುವ ಸಮಸ್ಯೆಗಳಿಗೆ ನಾವು ಯಾವುದೇ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ” ಎಂದು ಸಿಯುಕೆಯ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಗುರುರಾಜ್ ಮುಕರಂಬಿ ಹೇಳಿದರು. ಸಿಯುಕೆಯ ಗಣಿತ ವಿಭಾಗವು ಗಣಿತ ಮತ್ತು ಗಣಕಯಂತ್ರದಲ್ಲಿ ಬಿ.ಟೆಕ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಇಂಡಕ್ಷನ್ ಕಾರ್ಯಕ್ರಮದ ಸಮಾರೋಪದಲ್ಲಿ ಡಿಜಿಟಲ್ ಇಮೇಜ್ ಪೆÇ್ರಸೆಸಿಂಗ್ನಲ್ಲಿನ ಸವಾಲುಗಳು ಮತ್ತು ವಿದ್ಯಾರ್ಥಿಗಳ ಭವಿಷ್ಯದ ವೃತ್ತಿಜೀವನಕ್ಕಾಗಿ ಯಂತ್ರ ಕಲಿಕೆ, ಕೃತಕ ಬುದ್ಧಿ ಮತ್ತೆ ಮತ್ತು ಡೇಟಾ ವಿಜ್ಞಾನದ ಪ್ರಾಮುಖ್ಯತೆ ಕುರಿತು ಅವರು ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಆದ್ದರಿಂದ, ಐಟಿ ಕ್ಷೇತ್ರಕ್ಕೆ ಹೋಗಲು ಬಯಸುವವರಿಗೆ ಗಣಿತ ಮತ್ತು ಕಂಪ್ಯೂಟಿಂಗ್ ಜ್ಞಾನವಿರಬೇಕು. ಜಾಗತಿಕ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ ಅಗತ್ಯತೆ ಹೆಚ್ಚಾಗಿದ್ದು ಆರ್ಥಿಕ ಅಭಿವೃದ್ಧಿಗಾಗಿ ಜಾಗತಿಕವಾಗಿ ರಾಷ್ಟ್ರಗಳ ನಡುವೆ ಸ್ಪರ್ಧೆಗಳು ನಡೆಯುತ್ತಿವೆ. ಇತ್ತೀಚೆಗೆ, ಭಾರತೀಯ ಇಸ್ರೋ ಸಂಸ್ಥೆಯು ಚಂದ್ರಯಾನ-3 ನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಮತ್ತು ಅದು ಯಶಸ್ವಿಯಾಗಿದೆ. ಇದರರ್ಥ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನ ರಾಷ್ಟ್ರ ನಿರ್ಮಾಣದಲ್ಲಿ ಮತ್ತು ಸಮಾಜದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಆದ್ದರಿಂದ, ಈ ದಿಕ್ಕಿನಲ್ಲಿ ಹೆಚ್ಚಿನ ಐಟಿ ಕಂಪನಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಇದೀಗ, ಮೈಕ್ರೋಸಾಫ್ಟ್ ನ್ಯೂ ಪ್ರಾಜೆಕ್ಟ್ “ರೂಮಿ” ಮತ್ತು ಗೂಗಲ್ ಮುಂಬರುವ ಹೊಸ ಪ್ರಾಜೆಕ್ಟ್ “ಗೂಗಲ್ ಜೆಮಿನಿ” ನಡುವಿನ ಜಾಗತಿಕ ಸ್ಪರ್ಧೆಗಳು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿಶ್ವದ ಕೃತಕ ಬುದ್ಧಿಮತ್ತೆ ಉದ್ಯಮಕ್ಕೆ ಆಘಾತವನ್ನು ನೀಡಲಿವೆ ಹಾಗು ಇದು ಸಂಶೋಧನಾ ಸಮುದಾಯಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಈ ತಂತ್ರಜ್ಞಾನವು ಪ್ರಸ್ತುತ ಸಮಯದ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗುತ್ತದೆ. ಭವಿಷ್ಯದಲ್ಲಿ, ಕೃತಕ ಬುದ್ಧಿಮತ್ತೆಯ ಕ್ರಾಂತಿಯು ಅನೇಕ ಉದ್ಯಮಗಳಲ್ಲಿನ ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದೆ” ಎಂದು ಅವರು ಹೇಳಿದರು.
ಗಣಿತ ವಿಭಾಗದ ಮುಖ್ಯಸ್ಥ ಡಾ. ಜನಾರ್ಧನ ರೆಡ್ಡಿ ಮಾತನಾಡಿ “ಜಗತ್ತಿನಾದ್ಯಂತ ಗಣಕ ತಂತ್ರಜ್ಞಾನವು ಜನರ ಜೀವನದ ಅವಿಭಾಜ ಅಂಗವಾಗಿದೆ. ಗಣಿತವು ಗಣಕ ತಂತ್ರಜ್ಞಾನದ ಅಭಿವೃದ್ಧಿಗೆ ಮೂಲ ಕಾರಣವಾಗಿದೆ. ತಾವು ಗಣಿತ ವಿಜ್ಞಾನ ಆಯ್ಕೆಮಾಡಿರುವುದರಿಂದ ತಮಗೆ ಸಾಕಷ್ಟು ಉದ್ಯೋಗವಕಾಶಗಳಿವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಮೇಘಾ ಖಂಡೆಲವಾಲ, ಇತರ ಪ್ರಾಧ್ಯಾಪಕರು ಹಾಗು ವಿದ್ಯಾರ್ಥಿಗಳು ಹಾಜರಿದ್ದರು.